ಕುಂದಾಪುರ ಎಪ್ರಿಲ್ 26: ಜೋಕಾಲಿಯಲ್ಲಿ ಆಡುತ್ತಿದ್ದ ಬಾಲಕಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಸಾವನಪ್ಪಿರುವ ಘಟನೆ ಕುಂದಾಪರದ ಬೀಜಾಡಿ ಎಂಬಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಬೀಜಾಡಿ ಗ್ರಾಮ ನಿವಾಸಿ, ಸದಾನಂದ - ಅನಿತಾ ದಂಪತಿ ಪುತ್ರಿ ಪ್ರಾಧಾನ್ಯ (9)
ಬಾಲಕಿ ಬೇಸಿಗೆ ರಜೆ ಹಿನ್ನಲೆ ಮನೆಯ ಅಂಗಳದ ಎದುರುಗಡೆ ಮರಕ್ಕೆ ಸೀರೆಯಿಂದ ಜೋಕಾಲಿ ಕಟ್ಟಿ ಆಡುತ್ತಿದ್ದರು. ಸನಿಹದಲ್ಲಿ ನಿಲ್ಲಿಸಿದ್ದ ಕಾರನ್ನು ಸಂತೋಷ ಎಂಬಾತ ನಿರ್ಲಕ್ಷೃದಿಂದ ಚಲಾಯಿಸಿದ್ದರಿಂದ ಜೋಕಾಲಿ ಆಡುತ್ತಿದ್ದ ಪ್ರಾಧಾನ್ಯಳಿಗೆ ಡಿಕ್ಕಿ ಹೊಡೆದಿದೆ. ಆಕೆ ಕೆಳಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ, ಬಾಲಕಿ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ