ನಗರದ ನ್ಯೂ ಮಂಡ್ಲಿ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಮಧು (21) ಎಂಬಾತನ ಮೇಲೆ ಅನ್ಯಕೋಮಿನ 6 ಯುವಕರ ತಂಡ ಹಲ್ಲೆ ನಡೆಸಿದ್ದಾರೆ.
ಹೂವಿನ ವ್ಯಾಪಾರಿಯಾಗಿರುವ ಮಧು, ಮಂಡ್ಲಿ ಬಡಾವಣೆಯಲ್ಲಿ ಹೂವು ವಿತರಣೆಗೆ ಹೋಗಿದ್ದಾನೆ. ಈ ವೇಳೆ ಲಾಂಗು-ಮಚ್ಚು ಝಳಪಿಸುತ್ತ ಓಡಿಸಿಕೊಂಡು ಬಂದ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ್ದಾರೆ.
ಮೊದಲೇ ಕಿಡ್ನಿ ಆಪರೇಷನ್ ಮಾಡಿಕೊಂಡಿರುವ ಯುವಕ ಮಧುಗೆ, ಕಿಡ್ನಿ ಆಪರೇಷನ್ ಜಾಗದಲ್ಲಿಯೇ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ.
ಗಾಯಾಳು ಮಧುಗೆ ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಕೂಡಲೇ ದುಷ್ಕರ್ಮಿಗಳನ್ನು ಬಂಧಿಸುವಂತೆ ಹಿಂದೂಪರ ಸಂಘಟನೆ ಮುಖಂಡರ ಆಗ್ರಹ ಮಾಡಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ