ಕೇರಳದ ಕೊಟ್ಟಾಯಂನಿಂದ ಮಂಗಳಂ ಇಂಜಿನಿಯರಿಂಗ್ ಕಾಲೇಜಿನ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಡುಪಿ ಪ್ರವಾಸಕ್ಕೆ ಬಂದಿದ್ದರು.
ಎಲ್ಲರೂ ಮಲ್ಪೆ ತೋನ್ಸೆಪಾರ್ ದ್ವೀಪದ ಬಳಿ ನೀರಾಟ ಆಡುತ್ತಿದ್ದರು. ಈ ಪೈಕಿ ಅಲೆನ್ ರೆಜಿ, ಅಮಲ್, ಅನಿಲ್ ಎಂಬ ವಿದ್ಯಾರ್ಥಿಗಳು ನೀರಲ್ಲಿ ಮುಳುಗಿದ್ದಾರೆ. ಕೂಡಲೇ ಅವರನ್ನು ಹೊರಗೆ ಎಳೆತಂದು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಲಾಯಿತ್ತಾದರೂ ಬದುಕಲಿಲ್ಲ.
ಇವರ ಜತೆಗೆ ಮತ್ತೊಬ್ಬ ವಿದ್ಯಾರ್ಥಿ ನೀರಲ್ಲಿ ಮುಳುಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ಸ್ಥಳಕ್ಕೆ ಮಲ್ಪೆ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ