6 ವಿದ್ಯಾರ್ಥಿನಿಯರ ಮೆದುಳಿಗೆ ಚಿಕಿತ್ಸೆ ಆಗಬೇಕಾಗಿದೆ' ಹಿಜಾಬ್ ಧರಿಸಿಯೇ ಎಕ್ಸಾಂ ಬರೆಯೋದಕ್ಕೆ ಪಟ್ಟು ಹಿಡಿದ ಕಾರಣದಿಂದಲೇ ರಾಜ್ಯದಲ್ಲೇ ಧರ್ಮ ಸಂಘರ್ಷದ ಬೆಂಕಿ ಹೊತ್ತಿ ಉರಿಯುವಂತೆ ಆಗಿದೆ ಎಂದು ಹಿಜಾಬ್ ಹೋರಾಟಗಾರ್ತಿಯರ ವಿರುದ್ಧ ಆಂದೋಲ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಹಿಜಾಬ್ ಕಿಚ್ಚು ಬೂದಿ ಮುಚ್ಚಿದ ಕೆಂಡದಂತಿದೆ. ಹಿಜಾಬ್ ಪರ ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷೆಗಳಿಗೆ ಹಾಜರಾಗದ ಘಟನೆಗಳು ನಡೆದಿವೆ. ಇನ್ನೂ ಇದಕ್ಕೆ ಪುಷ್ಠಿ ಎಂಬಂತೆ ಮತ್ತೊಂದು ಸಂದೇಶವನ್ನು ರಾಜ್ಯದ ಮುಖ್ಯಮಂತ್ರಿಗಳಿಗೆ ಕಳುಹಿಸಲಾಗಿದೆ.
ರಾಜ್ಯದಲ್ಲಿ ಹಿಜಾಬ್ ನಿಷೇಧದ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದ 17 ವರ್ಷದ ಬಾಲಕಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮತ್ತೊಮ್ಮೆ ಮನವಿ ಸಲ್ಲಿಸಿದ್ದು, 'ನಮ್ಮ ಭವಿಷ್ಯವನ್ನು ಹಾಳುಮಾಡುವುದನ್ನು ತಡೆಯಲು ಇನ್ನೂ ಅವಕಾಶವಿದೆ' ಎಂದು ಹೇಳಿದ್ದಾರೆ.
ಹಿಜಾಬ್ ಹೋರಾಟಗಾರ್ತಿಯ ಈ ಟ್ವೀಟ್‌ಗೆ 6 ವಿದ್ಯಾರ್ಥಿನಿಯರ ಮೆದುಳಿಗೆ ಚಿಕಿತ್ಸೆ ಆಗಬೇಕಾಗಿದೆ ಎಂದು ಆಂದೋಲ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ