ಉಡುಪಿ ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ತಾರೀಕು ಇಪ್ಪತ್ತೊಂಬತ್ತರ ಶುಕ್ರವಾರ ಅಂದರೆ ಇಂದಿನಿಂದ ಸಂಜೆ ಗಂಟೆ ಆರರಿಂದ ಗಂಟೆ ಏಳರ ತನಕ 1ವಾರಗಳ ಕಾಲ 1008 ತುಪ್ಪದ ದೀಪೋತ್ಸವ ಸಪ್ತಾಹ ದುರ್ಗಾಸ್ತೋತ್ರ ಸುಳಾದಿ ಗಾಯನ ಪೂರ್ವಕ ನೆರವೇರಲಿದೆ .
ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀ ರಮಾನಂದ ಗುರೂಜಿ ದಿವ್ಯ ಉಪಸ್ಥಿತಿಯಲ್ಲಿ ಬನ್ನಂಜೆ ಶನಿ ಕ್ಷೇತ್ರದ ಶ್ರೀ ಶ್ರೀ ರಾಘವೇಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ವಿಶ್ವ ಶಾಂತಿಗಾಗಿ ಸಕಲ ಲೋಕ ಕಲ್ಯಾಣಕ್ಕಾಗಿ ಸಮಸ್ತ ಶನಿ ದೋಷಗಳ ಪ ಪರಿಹಾರವಾಗಿ ಇಷ್ಟಾರ್ಥ ಸಿದ್ಧಿಗಾಗಿ ಈ ಮಹಾನ್ ದೀಪೋತ್ಸವ ಸೇವೆಯನ್ನು ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ .
ನಿರಂತರ 7ದಿನಗಳ ಕಾಲ ಸಂಪನ್ನಗೊಳ್ಳಲಿರುವ ಈ ದೀಪೋತ್ಸವದಲ್ಲಿ ಕ್ಷೇತ್ರದ ವತಿಯಿಂದಲೇ ಎಣ್ಣೆ ಬತ್ತಿಯನ್ನು ಒದಗಿಸಲಾಗುವುದು .
ಯಾವುದೇ ಜಾತಿ ಮತ ಭೇದವಿಲ್ಲದೆ ಸಾಮೂಹಿಕವಾಗಿ ಭಕ್ತರುಗಳು ದೀಪ ಬೆಳಗುವ ರೇ ಈ ಮಹಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೃತಾರ್ಥರಾಗಬಹುದು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮಾ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ .
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ