ಕರ್ತವ್ಯನಿರತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಮಾಜಿ ಸಚಿವರ ನಡೆ ಖಂಡನೀಯ, ಸರಕಾರಿ ಅಧಿಕಾರಿ ಮೇಲೆ ದಬ್ಬಾಳಿಕೆ ನಡೆಸಿದ ಕಾಂಗ್ರೆಸ್ ನಡೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದಿರುವುದನ್ನು ಎತ್ತಿತೋರಿಸುತ್ತದೆ.
ಪ್ರತಿಭಟನಾ ಸ್ಥಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರವರ ತಲ್ಲಾಟದಿಂದಲೇ ಸೊರಕೆಯವರ ಅಂಗಿ ಹರಿದಿದ್ದು. ಈ ಬಗ್ಗೆ ಪಿ.ಡಿ.ಒಯವರೇ ಸ್ಪಷ್ಟನೆ ನೀಡಿದ್ದು, ತನ್ನವರಿಂದಲೇ ಅಂಗಿ ಹರಿಸಿಕೊಂಡು ಸೊರಕೆಯವರು ಹಲ್ಲೆ ನಾಟಕವಾಡಿದ್ದಾರೆ.
ಕರ್ತವ್ಯ ನಿರತ ಪಿ.ಡಿ.ಒ ಮೇಲೆ ಹಲ್ಲೆ ನಡೆಸಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಹಾಗೂ ಪೊಲೀಸ್ ಇಲಾಖೆಗೆ ಅಗ್ರಹಿಸುತ್ತೇನೆ ಎಂದು ಲಾಲಾಜಿ.ಆರ್.ಮೆಂಡನ್ ಹೇಳಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ