ಮಣಿಪಾಲ : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿ ರಸ್ತೆ ಅಪಘಾತಕ್ಕೆ ತುತ್ತಾಗಿ ಯುವಕನೋರ್ವ ತನ್ನ ಅಂಗಾಂಗಗಳನ್ನು ದಾನ ಮಾಡುವ ಮೂಲಕ 6 ಜನರ ಬಾಳಿಗೆ ಬೆಳಕಾಗಿ ಸಾವಿನಲ್ಲಿ ಸಾರ್ಥಕತೆ ಮೆರೆದಿದ್ದಾರೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ತಾಲೂಕಿನ ಉಪ್ಪಿನಕೋಟೆ ಬಳಿ ಅಪಘಾತಕ್ಕೆ ಈಡಾಗಿದ್ದ ಶ್ರೀನಿವಾಸ ಎಂಬಾತ ಬಹುತೇಕ ಪ್ರಾಣಪಾಯದಲ್ಲಿದ್ದರು. ಈತ ಸಾಲಿಗ್ರಾಮ ನಿವಾಸಿಯಾಗಿದ್ದು ರಾಜು ನಾಯಿರಿ ಎಂಬಾತರ ಮಗನೆಂದು ತಿಳಿದುಬಂದಿದೆ.
ರಸ್ತೆ ಅಪಘಾತದ ಬಳಿಕ ಶ್ರೀನಿವಾಸರನ್ನು ಕೆ.ಎಂ.ಸಿ ಆಸ್ಪತ್ರೆ ಮಣಿಪಾಲಕ್ಕೆ ದಾಖಲಿಸಲಾಗಿತ್ತು. ವೈದ್ಯರು ಚಿಕಿತ್ಸೆ ನಡೆಸುತ್ತಿರುವ ವೇಳೆ ಮೆದುಳು ನಿಷ್ಕ್ರಿಯಗೊಂಡಿದ್ದು ಕಂಡುಬಂದಿದ್ದು ಈ ವೇಳೆ ಅವರ ತಂದೆ ಮಗನ ಅಂಗಾಂಗಗಳನ್ನು ದಾನಮಾಡಲು ಇಚ್ಚಿಸಿದ್ದಾರೆ.
ಅದರಂತೆ 2 ಮೂತ್ರ ಪಿಂಡಗಳು , ಯಕೃತ್ತು , ಚರ್ಮ ಮತ್ತು 2 ಕಾರ್ನಿಯಾಗಳು ಅಥವ ಕಣ್ಣುಗಳು ಗೆಡ್ಡೆಗಳನ್ನು ತೆಗೆದು ಒಟ್ಟು 6 ಜನರ ಜೀವಗಳಿಗೆ ಈ ಮೂಲಕ ಬೆಳಕಾಗಿದ್ದಾರೆ.
ಇನ್ನು 2 ಕಾರ್ನಿಯಾಗಳು , 2 ಮೂತ್ರ ಪಿಂಡಗಳು , ಚರ್ಮವನ್ನು ಕೆ.ಎಂ.ಸಿ. ಆಸ್ಪತ್ರೆ ಮಣಿಪಾಲದಲ್ಲಿ ದಾಖಲಾಗಿದ್ದ ರೋಗಿಗಳಿಗೆ ಬಳಸಲಾಯಿತು. ಇನ್ನುಳಿದಂತೆ ಯಕೃತ್ತನ್ನು ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ ಕಳುಹಿಸಿ ಕೊಡಲಾಯಿತು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ