Slider

ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ವಿಷ್ಣು ಸಹಸ್ರನಾಮ ಯಾಗ ಸಂಪನ್ನ 5-4-2022

ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ವಿಷ್ಣು ಸಹಸ್ರನಾಮ ಯಾಗ ಸಂಪನ್ನ 

ಉಡುಪಿ ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ನಿರ್ಮಾಣಗೊಂಡ ನೂತನ ಗುಡಿಯಲ್ಲಿ ಕುಬೇರ ಚಿತ್ರಲೇಖಾ ಸಹಿತ ಮಹಾಲಕ್ಷ್ಮಿಯ ಅಷ್ಟಬಂಧ ಪ್ರತಿಷ್ಠಾ ಮಹೋತ್ಸವದ ಪೂರ್ವಭಾವಿ ಪ್ರಾಯಶ್ಚಿತ್ತ ಕಾರ್ಯಕ್ರಮವಾಗಿ ಶ್ರೀ ವಿಷ್ಣು ಸಹಸ್ರನಾಮ ಯಾಗ ಸಂಪನ್ನಗೊಂಡಿತು .


ಬೆಳಿಗ್ಗೆ ಆರಂಭಗೊಂಡ ಧಾರ್ಮಿಕ ಪ್ರಕ್ರಿಯೆಯಲ್ಲಿ ಸ್ವಸ್ತಿ ಪುಣ್ಯಾಹವಾಚನ ಸಪರಿವಾರ ದೇವರುಗಳಿಗೆ ಸ್ನಪನ ಕಲಶಾಭಿಷೇಕ ಪ್ರಧಾನಹೋಮ 
 ಸಂಜೆ ಶ್ರೀ ಕುಬೇರ ಚಿತ್ರಲೇಖಾ ಸಹಿತ ಮಹಾಲಕ್ಷ್ಮಿ ದೇವರ ನೂತನ ಬಿಂಬಶುದ್ದಿ ಪ್ರಕ್ರಿಯೆ ಶ್ರೀ ದುರ್ಗಾ ಆದಿಶಕ್ತಿ ದೇವಿಗೆ ಪಂಚವಿಂಶತಿ ದ್ರವ್ಯಮಿಳಿತ ಅಷ್ಟೋತ್ತರ ಶತ ಕಲಶಾಧಿ ವಾಸ ಪ್ರಕ್ರಿಯೆ ನೆರವೇರಿತು .


ಮಧ್ಯಾಹ್ನ ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯಸೇವೆ ವಿದ್ಯಾರ್ಥಿಗಳಿಂದ ಸಮರ್ಪಿಸಲ್ಪಟ್ಟಿತು ಸಂಜೆ ಶ್ರೀ ಆಂಜನೇಯ ಮಹಿಳಾ ಮಹಿಳಾ ಭಜನಾ ಮಂಡಳಿ ವ್ಯಾಯಾಮಶಾಲೆ ಇದರ ಭಜಕರಿಂದ ಭಜನ ಸಂಕೀರ್ತನೆ ಹಾಗೂ ಶ್ರೀಯುತ ಅರವಿಂದ ಹೆಬ್ಬಾರ್ ಕುಮಾರಿ ಅರ್ಚನಾ ಕುಮಾರಿ ಮತ್ತು ತಂಡದವರಿಂದ ಗಾನ ಸೌರಭ ಸಮರ್ಪಿಸಲ್ಪಟ್ಟಿತು ಕೀಬೋರ್ಡ್ ನಲ್ಲಿ ಶ್ರೀ ಕೆ ಮುರಳೀಧರ್ ತಬಲದಲ್ಲಿ ಶ್ರೀಯನ್ ಮಾಧವ ಆಚಾರ್ಯ ಸಹಕರಿಸಿದರು .


ನಿರಂತರ ಅನ್ನ ಸಂತರ್ಪಣೆಯೂ ನೆರವೇರಿತ್ತು 
ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತ್ರತ್ವದಲ್ಲಿ ಎಲ್ಲಾ ಕಾರ್ಯಕ್ರಮಗಳು ಸಂಪನ್ನಗೊಳ್ಳುತ್ತಿದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ ತಿಳಿಸಿರುತ್ತಾರೆ
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo