Slider

ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ವೆಬ್ ಸೈಟ್ ಉದ್ಘಾಟನೆ.5-4-2022

ಉಡುಪಿ ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಈ ಕ್ಷೇತ್ರದ ನೂತನ ವೆಬ್ ಸೈಟ್ ಉದ್ಘಾಟನೆ ಗೊಂಡಿತು . ಕ್ಷೇತ್ರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀ ಶ್ರೀ ರಮಾನಂದ ಗುರೂಜಿ ಹಾಗೂ ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿ ಜಂಟಿಯಾಗಿ ಈ ವೆಬ್ ಸೈಟನ್ನು ಉದ್ಘಾಟಿಸಿದರು. 

https://shreedurgaadishakthi.com/

ಕ್ಷೇತ್ರದ ತಂತ್ರಿಗಳು ಮಾತನಾಡಿ ಕ್ಷೇತ್ರದಲ್ಲಿ ನಿತ್ಯ ನೈಮಿತ್ತಿಕ ವಾದಂತಹ ಆಚರಣೆಗಳು ಶಾಸ್ತ್ರೋಕ್ತವಾಗಿ ನೆರವೇರಿ ಚೈತನ್ಯಶಕ್ತಿಯ ಕಾರಣಿಕದಿಂದ ದಿನಂಪ್ರತಿ ಕ್ಷೇತ್ರ ಸಂದರ್ಶಿಸುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು ದೇವತಾರಾಧನೆ ಕಲಾರಾಧನೆ ಅನ್ನ ಆರಾಧನೆಯಿ೦ದ ನಿತ್ಯೋತ್ಸವ ನಡೆಯುತ್ತಿದೆ . ಇಂತಹ ಕಾರಣಿಕ ಕ್ಷೇತ್ರದ ಬಗ್ಗೆ ಅರಿವು ಮೂಡಿಸಲು ಈ ವೆಬ್ ಸೈಟ್ ಗೆ ಸಹಕಾರಿಯಾಗಲಿದೆ ಎಂದರು .ಮತ್ತೋರ್ವ ಮುಖ್ಯ ಅತಿಥಿಯಾಗಿ ಮಾತನಾಡಿದ ಶ್ರೀಯುತ ಅರವಿಂದ ಹೆಬ್ಬಾರ್ ಅವರು ಈಗಾಗಲೇ ದೇಶ ವಿದೇಶಗಳಿಂದ ಭಕ್ತರನ್ನು ಹೊಂದಿದ ಶ್ರೀಕ್ಷೇತ್ರದ ಕಾರಣಿಕ ಹಾಗೂ ರಮಾನಂದ ಗುರೂಜಿಯವರ ಬಗ್ಗೆ ಪ್ರಪಂಚದ ಮೂಲೆಮೂಲೆಗೂ ಮಾಹಿತಿ ತಲುಪಲು ಈ ವೆಬ್ ಸೈಟ್ ನ ಅಗತ್ಯತೆ ಇತ್ತು ಅದು ಇಂದು ಪೂರ್ಣಗೊಂಡಿದೆ ಎಂದರು .

ಶ್ರೀ ಕ್ಷೇತ್ರದ ವೆಬ್ ಸೈಟನ್ನು ಮಣಿಪಾಲದ ಎಕ್ಸಲನ್ಸ್ ಪ್ರೈವೇಟ್ ಲಿಮಿಟೆಡ್ ನ ಬಿಕೆ ಸುದರ್ಶನ್ ರಂಜನಿ ಮಾಧವಿ ಐತಾಳ್ ವಿನ್ಸೆಂಟ್ ಪಿಂಟೊ ಇವರುಗಳು ಸಿದ್ಧಪಡಿಸಿದ್ದು ಕ್ಷೇತ್ರಕ್ಕೆ ಕಾಣಿಕೆಯಾಗಿ ಸಮರ್ಪಿಸಿದರು .ವೆಬ್ ಸೈಟ್ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದ ಬಿ ಕೆ ಸುದರ್ಶನ್ ಅವರನ್ನು ಕ್ಷೇತ್ರದ ಧರ್ಮದರ್ಶಿ ಸ್ಮರಣಿಕೆ ನೀಡಿ ಗೌರವಿಸಿದರು .ಪ್ರೀತಿಯ ಉಡುಗೊರೆ ಯಾಗಿ ಎಲ್ಲರಿಗೂ ಕೈಗಡಿಯಾರವನ್ನು ಇತ್ತು ಆಶೀರ್ವದಿಸಿದರು .
ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮಾ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು .
ಹಿರಿಯಡ್ಕದ ಶ್ರೀಮತಿ ಉಷಾ ಪ್ರಶಾಂತ್ ಶ್ರೀಮತಿ ಉಷಾ ರಮಾನಂದ್ ಈ ಬಾಲ ಸುಬ್ರಹ್ಮಣ್ಯ ರಾವ್ ಮಣಿಪಾಲ್ ಟೆಕ್ನಾಲಜೀಸ್ ನ ಶ್ರೀಯುತ ನಾಗರಾಜಾಚಾರ್ಯ ಭರತ್ ಶೆಟ್ಟಿ ಸ್ವಸ್ತಿಕ್ ಆಚಾರ್ಯ ಅರ್ಚಕ ಅನೀಶಾಚಾರ್ಯ ದೀಪಕ್ ಕುಮಾರ್ ಆನಂದ್ ಬಾಯಾರಿ.ಮೃಣಾಲ್ ಕೃಷ್ಣ ಉಪಸ್ಥಿತರಿದ್ದರು .

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo