ಉಡುಪಿ ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಶ್ರೀ ಕುಬೇರ ಚಿತ್ರಲೇಖಾ ಸಹಿತ ಮಹಾಲಕ್ಷ್ಮಿ ದೇವರ ಪ್ರತಿಷ್ಠಾಪನಾ ಪೂರ್ವಭಾವಿ ಧಾರ್ಮಿಕ ಪ್ರಕ್ರಿಯೆಾಗಿ ಸ್ವಸ್ತಿ ಸ್ವಸ್ತಿ ಪುಣ್ಯಾಹವಾಚನ ನವಗ್ರಹ ಯಾಗ ಆಚಾರ್ಯಾದಿ ಋತ್ವಿಕ್ ವರ್ಣ ಅರಣಿ ಮಥನ ಶಾಂತಿ ಪ್ರಾಯಶ್ಚಿತ್ತಾದಿ ಹೋಮ ಗಳು ಮನ್ಯು ನಾಮಕ ಲಕ್ಷ್ಮೀನರಸಿಂಹ ಯಾಗ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿ ನೇತೃತ್ವದಲ್ಲಿ ನೆರವೇರಿತು ..
ಮಧ್ಯಾಹ್ನ ಮಹಾಪೂಜೆಯ ಬಳಿಕ ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯಸೇವೆ
ಕುಮಾರಿ ksithi ಸಂಜನಾ ಕಾತ್ಯಾಯಿನಿ ಕುಮಾರಿ ಸವಿ ಮತ್ತು ಪವಿತ್ರ ಪ್ರಣವಿ ಅವರಿಂದ ಸಮರ್ಪಿಸಲ್ಪಟ್ಟಿತ್ತು .
ಸಂಜೆ ನಾಗೇಶ್ವರ ಭಜನಾ ಮಂಡಳಿಗಳ ಭಜಕರಿಂದ ಭಜನೆ ಸಂಕೀರ್ತನೆ ಹಾಗೂ ಡಾಕ್ಟರ್ ಮಂಜರಿಚಂದ್ರ ಪುಷ್ಪರಾಜ್ ಸಾರಥ್ಯದ ಸೃಷ್ಟಿ ಕಲಾ ಕುಟೀರದ ನೃತ್ಯ ರ್ಥಿಗಳಿಂದ ನೃತ್ಯ ವೈಭವ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮೂಡಿಬಂತು. ಪಂಚದುರ್ಗ ನಮಸ್ಕಾರ ಪೂಜೆ ಹಾಗೂ ಸುದರ್ಶನ ಯಾಗವು ಕ್ಷೇತ್ರದಲ್ಲಿ ನೆರವೇರಿತು ರಾತ್ರಿ ಕಲ್ಪೋಕ್ತ ಪೂಜೆ ಯ ನಂತರವೂ ಮಹಾಪ್ರಸಾದವಾಗಿ ಅನ್ನಪ್ರಸಾದ ವಿತರಣೆ ಗೊಂಡಿತು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಗರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ .
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ