Slider

ಆಳ ಸಮುದ್ರದಲ್ಲಿ ಮುಳುಗಡೆಯಾದ ಮೀನುಗಾರಿಕೆಗೆ ತೆರಳಿದ್ದ ಬೋಟ್!!4-4-2022

ಭಟ್ಕಳ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಬೋಟ್​ ಭಟ್ಕಳ ಬಂದರು ಸಮೀಪದ ಕೋಟೆಗುಡ್ಡದ ಬಳಿ ಮುಳುಗಡೆಯಾಗಿದೆ. ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಮಲ್ಪೆಯ ತೊಟ್ಟಂ ನಿವಾಸಿ ದೀಕ್ಷಿತ್ ಸುಂದರ ಕೊಟ್ಯಾನ್ ಎನ್ನುವವರಿಗೆ ಸೇರಿದ ಸಿಹಾನ್ ಫಿಶರೀಸ್ ಬೋಟ್ ಮುಳುಗಡೆಯಾಗಿದ್ದು ಲಕ್ಷಾಂತರ ರೂಪಾಯಿ ಹಾನಿಯಾಗಿದೆ ಎನ್ನಲಾಗುತ್ತಿದೆ.

ಮಾ.3ರಂದು ರಾತ್ರಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೋಗಿದ್ದ ಬೋಟ್​, ಭಟ್ಕಳ ತಾಲೂಕಿನ ಕೋಟೆಗುಡ್ಡೆ ಬಳಿಯಲ್ಲಿ ಮೀನುಗಾರಿಕೆಯಲ್ಲಿ ನಿರತವಾಗಿತ್ತು. ಈ ವೇಳೆ ಬೋಟ್​ನ ಅಡಿ ಭಾಗಕ್ಕೆ ಬಲವಾದ ವಸ್ತುವೊಂದು ಡಿಕ್ಕಿ ಹೊಡೆದಿದ್ದು ರಂಧ್ರವಾಗಿ ನೀರು ಬರಲಾರಂಭಿಸಿದೆ. ತಕ್ಷಣ ಚಾಲಕ ಅಳ್ವೇಕೋಡಿಯ ರವಿ ನಾಗಪ್ಪ ಮೊಗೇರ ಬೇರೆ ಬೋಟುಗಳನ್ನು ಕರೆದು ಅದಕ್ಕೆ ತಮ್ಮ ಬೋಟನ್ನು ಕಟ್ಟಿ ಎಳೆದುಕೊಂಡು ಬರಲು ಪ್ರಯತ್ನಿಸಿದರು. ಆದರೂ ಬೋಟ್​ನೊಳಗಡೆ ನೀರು ಜೋರಾಗಿ ಬರಲು ಆರಂಭವಾಗಿದ್ದರಿಂದ ಮುಳುಗಡೆಯಾಗಿದೆ.

ಬೋಟ್​ನಲ್ಲಿದ್ದ ಮೀನುಗಾರರಾದ ಮೋಹನ, ಮಂಜುನಾಥ, ದೇವೇಂದ್ರ, ರಮೇಶ, ವೆಂಕಟೇಶ ಕಲ್ಲೇಶಿ ಎಂಬುವವರನ್ನು ಬೇರೆ ಬೋಟ್​ನವರು ರಕ್ಷಿಸಿದ್ದು, ಕೆಲವು ವಸ್ತುಗಳನ್ನು ಕೂಡಾ ರಕ್ಷಣೆ ಮಾಡಲಾಗಿದೆ ಎನ್ನಲಾಗಿದೆ. ಬೋಟು ಮುಳುಗಡೆಯಿಂದ ತಮಗೆ ಲಕ್ಷಾಂತರ ರೂಪಾಯಿ ಹಾನಿಯಾಗಿದೆ ಎಂದು ಮಾಲೀಕರು ತಿಳಿಸಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo