Slider


ಪೆಟ್ರೋಲ್ ಡೀಸೆಲ್ ಆಯ್ತು.. ಈಗ ವಿದ್ಯುತ್ ದರ ಏರಿಕೆ:-ಪ್ರತಿ ಯುನಿಟ್‌ಗೆ 35ಪೈಸೆ ಹೆಚ್ಚಳ5-4-2022

ಈಗಾಗಲೇ ರಾಜ್ಯದಲ್ಲಿ ದಿನೇದಿನೇ ಪೆಟ್ರೋಲ್, ಡೀಸೆಲ್, ಅಡುಗೆ ಸಿಲಿಂಡರ್ ದರ ಏರಿಕೆಯಾಗುತ್ತಿದೆ. ಇದರ ಬೆನ್ನಲ್ಲೇ ಇದೀಗ ವಿದ್ಯುತ್ ದರ ಕೂಡ ಏರಿಕೆಯಾಗಿದೆ.

ಕಳೆದ ವರ್ಷವೂ ಸಹ ಪ್ರತಿ ಯುನಿಟ್ ಗೆ 30 ಪೈಸೆ ಹೆಚ್ಚಳವಾಗಿದ್ದು, ಈ ಬಾರಿ 1 ರೂಪಾಯಿ 50 ಪೈಸೆ ಹೆಚ್ಚಳ ಮಾಡುವಂತೆ ಪ್ರಸ್ತಾವನೆಯನ್ನು ಬೆಸ್ಕಾಂ ಸಲ್ಲಿಸಿತ್ತು. ಅದರೆ ಬೆಸ್ಕಾಂ ವ್ಯಾಪ್ತಿಯ ಪ್ರತಿ ಯುನಿಟ್ ಗೆ 35 ಪೈಸೆ ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ದರ ಏಪ್ರಿಲ್ 1ರಿಂದಲೇ ಅನ್ವಯವಾಗಲಿದೆ.

ರಾಜ್ಯದ ವಿದ್ಯುತ್ ಸರಬರಾಜು ಕಂಪನಿ ಗಳಾದ ಬೆಸ್ಕಾಂ, ಮೆಕ್ಕಾಂ, ಚೆಕ್ಕಾಂ ಸೇರಿದಂತೆ ಇತರ ಕಂಪನಿಗಳು ಪ್ರತಿಬಾರಿಯಂತೆ ಈ ವರ್ಷದ ಸಹ ದರ ಹೆಚ್ಚಳಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದರು ಆದರೆ ಈ ಬಾರಿ ಕೇವಲ 35 ಪೈಸೆಯನ್ನು ಮಾತ್ರ ಏರಿಕೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo