ಉಡುಪಿ: ಮಂಗಳೂರಿನಿಂದ ಉಡುಪಿಯತ್ತ ಅಗಮಿಸುತ್ತಿದ್ದ A.K.M.S ಬಸ್ಸಿನ ಬ್ರೇಕ್ ವೈಫಲ್ಯ ಹೊಂದಿದ ಕಾರಣ ಬಸ್ ನಿಯಂತ್ರಣ ತಪ್ಪಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಬಸ್ಸನ್ನು ಬೋರ್ಡ್ ಹೈಸ್ಕೂಲ್ ಎದುರುಗಡೆಯ ಫುಟ್ ಪಾತ್ ಮೇಲೆ ಹತ್ತಿಸಿ ನಿಲ್ಲಿಸಿದ ಕಾರಣ ಭಾರೀ ಅಪಾಯ ತಪ್ಪಿದೆ.
ಮಂಗಳೂರಿನಿಂದ ಉಡುಪಿ ಅಗಮಿಸುವ ದಾರಿ ಮಧ್ಯೆ ಬಸ್ಸಿನಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಿತ್ತು. ಅದರೂ ಪ್ರಯಾಣಿಕರಿದ್ದ ಕಾರಣ ನಗರದೊಳಗೆ ಬಸ್ಸನ್ನು ಚಾಲಾಯಿಸಿಕೊಂಡು ಬಂದಿದ್ದ.
ಸರ್ವಿಸ್ ಬಸ್ ನಿಲ್ದಾಣ ಸಮೀಪಿಸುತ್ತಿದ್ದಂತೆ ಬಸ್ ಇಂಜಿನ್ ಏಕಾ ಏಕಿ ಬಂದ್ ಅಗಿ ಬ್ರೇಕ್ ಹಿಡಿಯದೇ ಚಲಿಸಲು ಅರಂಭಿಸಿತ್ತು. ರಸ್ತೆ ಪಕ್ಕಾ ಹಲವು ಗೂಡಂಗಡಿಗಳು ಹಾಗೂ ಪಾರ್ಕಿಂಗ್ ಮಾಡಿದ ವಾಹನಗಳು ನಿಂತಿದ್ದು ಬಸ್ಸಿನಲ್ಲಿಯೂ ಪ್ರಯಾಣಿಕರಿದ್ದ ಕಾರಣ ಚಾಲಕ ಸಮಯ ಪ್ರಜ್ಞೆಯಿಂದ ಫುಟ್ ಪಾತ್ ಮೇಲೆ ಹತ್ತಿಸಿದ ಪರಿಣಾಮ ಬಸ್ ನಿಂತಿದೆ.
ಹೀಗಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರು ಹಾಗೂ ರಸ್ತೆ ಪಕ್ಕದಲ್ಲಿದ್ದ ಪಾದಚಾರಿಗಳಿಗೆ ಯಾವುದೇ ಜೀವಪಾಯವಿಲ್ಲದೆ ಪಾರಾಗಿದ್ದಾರೆ. ಚಾಲಕನ ಸಮಯ ಪ್ರಜ್ಞೆಯನ್ನು ಸಾರ್ವಜನಿಕರು ಮುಕ್ತ ಕಂಠದಿಂದ ಪ್ರಶಂಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ