ಮಂಗಳೂರು, ಏಪ್ರಿಲ್ 29: ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಕರಾವಳಿಯಲ್ಲಿ ಮತ್ತೊಂದು ಧರ್ಮ ದಂಗಲ್ ಶುರುವಾಗಿದೆ. ಆದರೆ ಈ ಬಾರಿ 'ಹಿಂದೂ ಶಾಸಕ'ನ ಆಯ್ಕೆಗಾಗಿ ಹಿಂದೂ ಸಂಘಟನೆಗಳು ಅಭಿಯಾನ ಆರಂಭಿಸಿದ್ದು, ವಿಪಕ್ಷ ಉಪನಾಯಕ ಯು.ಟಿ. ಖಾದರ್ ಕ್ಚೇತ್ರದಲ್ಲೇ ವಿಎಚ್‌ಪಿ-ಬಜರಂಗದಳ ಫೀಲ್ಡ್‌ಗಿಳಿದಿದೆ.
'ಹಿಂದೂ ಶಾಸಕ' ಅಭಿಯಾನಕ್ಕೆ ವಿಎಚ್‌ಪಿ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಕರೆ ನೀಡಿದ್ದು, "ಮಾಜಿ ಸಚಿವ ಯು.ಟಿ. ಖಾದರ್ ಬದಲಾವಣೆಗೆ ವಿಎಚ್‌ಪಿ ಅಭಿಯಾನ ನಡೆಸುತ್ತಿದೆ. 'ಉಳ್ಳಾಲದಲ್ಲಿ ಹಿಂದೂಗಳ ಪರ ಧ್ವನಿ ಎತ್ತಲು ಹಿಂದೂ ಶಾಸಕ ಇರಲಿ, ಮುಂದಿನ ಚುನಾವಣೆಯಲ್ಲಿ ಉಳ್ಳಾಲದಲ್ಲಿ ಹಿಂದೂ ಶಾಸಕನ ಗೆಲ್ಲಿಸಲು ವಿಎಚ್‌ಪಿ ಈ ಅಭಿಯಾನ ನಡೆಸ್ತಿದೆ," ಅಂತ ವಿಎಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ಹೇಳಿದ್ದಾರೆ.
ಬಿಜೆಪಿ, ಕಾಂಗ್ರೆಸ್ ಯಾವುದೇ ಪಕ್ಷದಲ್ಲಿ ಹಿಂದೂ ಶಾಸಕ ಬರಲಿ. ಉಳ್ಳಾಲದಲ್ಲಿ ರಾಹುಲ್ ಗಾಂಧಿಯೇ ನಿಲ್ಲಲಿ, ಕಾಂಗ್ರೆಸ್ ಹಿಂದೂವನ್ನು ನಿಲ್ಲಿಸಿ ಗೆಲ್ಲಿಸಲಿ. ಉಳ್ಳಾಲದಲ್ಲಿ ಹಲವು ವರ್ಷಗಳಿಂದ ಒಂದೇ ಕುಟುಂಬದ ಮುಸ್ಲಿಂ ಶಾಸಕರಿದ್ದಾರೆ. ಉಳ್ಳಾಲ ಕಾಂಗ್ರೆಸ್‌ನಲ್ಲಿ ಸಾಕಷ್ಟು ಹಿಂದೂಗಳಿದ್ದು, ಅವರಿಗೆ ಅವಕಾಶ ಕೊಡಿ. ಉಳ್ಳಾಲದಲ್ಲಿ 50% ಮುಸಲ್ಮಾನರಿದ್ದು, ಹಿಂದೂಗಳಿಗೆ ಬದುಕಲು ಕಷ್ಟ ಇದೆ. ಕಾಂಗ್ರೆಸ್ ಹಿಂದೂವಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿದರೂ ವಿಎಚ್‌ಪಿ ಸ್ವಾಗತ ಅಂತ ಯು.ಟಿ. ಖಾದರ್ ತವರು ಕ್ಷೇತ್ರದಲ್ಲೇ ವಿಎಚ್‌ಪಿ ಧರ್ಮ ದಂಗಲ್ ಬೆಂಕಿ ಹೊತ್ತಿಸಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ