ಹಂಗಾರಕಟ್ಟೆ : ಸಾಮಾನ್ಯವಾಗಿ ನಮಗೆ ಬೋಟಿಂಗ್ ಎಂದಾಕ್ಷಣ ತಕ್ಷಣ ನೆನಪಿಗೆ ಬರುವುದೇ ನಮ್ಮ ಪಕ್ಕದ ರಾಜ್ಯಗಳು. ವೀಕೆಂಡ್, ಹಬ್ಬ ಹರಿದಿನ , ಮೋಜು ಮಸ್ತಿ, ಪಾರ್ಟಿ ಎಂದಾಕ್ಷಣ ಇಂದಿನ ಯುವಜನತೆ ನಮ್ಮ ನೆರೆರಾಜ್ಯಕ್ಕೆ ಹೋಗಿ ಅಲ್ಲಿನ ರಮಣೀಯ ಪ್ರಕೃತಿ ಸೌಂದರ್ಯದ ಜೊತೆ ಒಂದಷ್ಟು ಕಾಲಕಳೆದು ಬರುವುದುಂಟು.. ಆದ್ರೆ ಈಗ ಅನುಭವವನ್ನು ಪಡೆಯಲು ನೀವು ನೆರೆ ರಾಜ್ಯಕ್ಕೆ ಹೋಗಬೇಕೆಂದೇ ಇಲ್ಲ...
ನಮ್ಮ ಉಡುಪಿಯಿಂದ ಕೇವಲ 20 ಕಿ.ಮೀ ದೂರ ಕ್ರಮಿಸಿದರೆ ಹಂಗಾರಕಟ್ಟೆಯಲ್ಲಿ ನೀವು ಈ ಅದ್ಬುತ ಅನುಭವ ಪಡೆಯಬಹುದು. ಪ್ರಕೃತಿ ತಾಣಕ್ಕೆ ಹೆಸರುವಾಸಿಯಾದ ಹಂಗಾರಕಟ್ಟೆಯ ಸೀತಾ ನದಿಯಿಂದ ಸುತ್ತುವರೆದು ಅರಬ್ಬಿ ಸಮುದ್ರವನ್ನು ಸೇರುವ ಕಡಲು, ಪ್ರವಾಸಿಗರು ಸೂರ್ಯೋದಯ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಲು ಅದ್ಬುತವಾದ ಜಾಗ.
ಈ ಜಾಗದಲ್ಲಿ ಈಗ "ಸೀತಾರ ಬೋಟಿಂಗ್" ಪ್ರಾರಂಭವಾಗಿದ್ದು, ಸುತ್ತಮುತ್ತಲ ಪರಿಸರ ವೀಕ್ಷಣೆ, ಜಲವಿಹಾರ, ಹುಟ್ಟು ಹಬ್ಬದ ಆಚರಣೆ, ವಾರ್ಷಿಕ ಮದುವೆ ಸಂಭ್ರಮದ ಆಚರಣೆ, ಪ್ರತ್ಯೇಕ ಪಾರ್ಟಿ, ನಡೆಸಲು ಗ್ರಾಹಕರಿಗೆ ಅನುಕೂಲವಾಗುವಂತೆ ಉತ್ತಮ ಸೌಲಭ್ಯವನ್ನು ನೀಡಲಾಗುತ್ತಿದೆ..
ಈಗಾಗಲೇ ಹಲವಾರು ಪ್ರವಾಸಿಗರು ಸಹಿತ ಸ್ಥಳೀಯರು ಸೀತಾರ ಬೋಟಿಂಗ್ ಅಲ್ಲಿ ಪ್ರಯಾಣಿಸಿ , ಎಂಜಾಯ್ ಮಾಡೋದ್ರ ಜೊತೆಗೆ ಹೊಸ ಅನುಭವವನ್ನು ಪಡೆದುಕೊಂಡಿದ್ದಾರೆ.
ನೀವೆನಾದ್ರೂ ನಿಮ್ಮ ಫ್ಯಾಮಿಲಿ, ಫ್ರೆಂಡ್ಸ್, ಜೊತೆ ಗೆಟ್- ಟುಗೆದರ್, ಪಾರ್ಟಿ, ಮೋಜು ಮಸ್ತಿ ಮಾಡೋದಿದ್ರೆ, ಹಂಗಾರಕಟ್ಟೆ ಯಲ್ಲಿರುವ "ಸೀತಾರ ಬೋಟಿಂಗ್" ನಿಮ್ಮ ಪಾರ್ಟಿಗೆ ಹೊಸ ಸ್ಪರ್ಶ ನೀಡೋದ್ರ ಜೊತೆಗೆ ಹೊಸ ಅನುಭವವನ್ನು ನೀಡೋದ್ರಲ್ಲಿ ಸಂಶಯವೇ ಬೇಡ.
ಸೀತಾರ ಬೋಟಿಂಗ್ ಕುರಿತ ಹೆಚ್ಚಿನ ಮಾಹಿತಿಗಾಗಿ
RAMESH:-9632302537
NITHIN:-8660571439
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ