Slider


ಕುಂದಾಪುರ:-ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಚಿನ್ನದ ಸರ ಕಳವು 29-4-2022

 


ಕುಂದಾಪುರ : ವಿಳಾಸ ಕೇಳುವ ನೆಪದಲ್ಲಿ ಮಹಿಳೆಯೊಬ್ಬರು ಧರಿಸಿದ್ದ 75 ಸಾವಿರ ರೂ. ಮೌಲ್ಯದ ಚಿನ್ನದ ಸರವನ್ನು ಸುಲಿಗೆ ಮಾಡಿರುವ ಘಟನೆ ಇಂದು ಅಪರಾಹ್ನ ಕಾಳಾವರ ಗ್ರಾಮದ ನಡುಬೆಟ್ಟು ಎಂಬಲ್ಲಿಂದ ವರದಿಯಾಗಿದೆ.



ಅಪರಾಹ್ನ 12.10ರ ಸುಮಾರಿಗೆ ಸ್ಥಳೀಯ ನಿವಾಸಿ ಪದ್ದಮ್ಮ ಶೆಡ್ತಿ ಎಂಬವರು ಮನೆಗೆ ನಡೆದುಕೊಂಡು ಹೋಗುತಿದ್ದ ವೇಳೆ ಆರೋಪಿ ರಸ್ತೆ ಬದಿ ಬೈಕ್ ನಿಲ್ಲಿಸಿಕೊಂಡು ಪದ್ದಮ್ಮ ಬಳಿಕ 'ಇಲ್ಲಿ ರಾಮಣ್ಣನ ಮನೆ ಎಲ್ಲಿ' ಎಂದು ಕೇಳಿದ್ದು, ಆ ಹೆಸರಿನವರು ಇಲ್ಲಿ ಯಾರೂ ಇಲ್ಲ ಎಂದು ಹೇಳುವಷ್ಟರಲ್ಲಿ ಕುತ್ತಿಗೆಯಲ್ಲಿದ್ದ ಎರಡು ಪವನ್ ತೂಕದ ಚಿನ್ನದ ಚೈನ್‌ನ್ನು ಬಲಾತ್ಕಾರವಾಗಿ ಕಿತ್ತುಕೊಂಡು ಬೈಕ್‌ನಲ್ಲಿ ಪರಾರಿಯಾಗಿರುವುದಾಗಿ ದೂರಲಾಗಿದೆ.



ಆರೋಪಿ ಬೆನ್ನಿಗೆ ಸ್ಕೂಲ್ ಬ್ಯಾಗ್ ಹಾಕಿಕೊಂಡಿದ್ದು, ತಲೆಗೆ ಹೆಲ್ಮೆಟ್ ಹಾಕಿರುವುದಾಗಿ ಪದ್ದಮ್ಮ ಶೆಡ್ತಿ ಮಗ ಅಶೋಕ್ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.




0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo