Slider

ಉಡುಪಿ:-ಕೃಷ್ಣ ಮಠಕ್ಕೆ ಬಂದ ಪ್ರವಾಸಿಗರ ಚಿನ್ನಾಭರಣ ಹಾಗೂ ನಗದು ಕಳವು 26-4-2022

 


ಉಡುಪಿ: ಮುಂಬೈನಿಂದ ಕೃಷ್ಣಮಠಕ್ಕೆ ದೇವರ ದರ್ಶನಕ್ಕೆ ಬಂದಿದ್ದ ಮಹಿಳೆಯ ಪರ್ಸ್‌ನಲ್ಲಿದ್ದ ಚಿನ್ನಾಭರಣ, ನಗದು ಹಾಗೂ ದಾಖಲೆಗಳನ್ನು ಕಳವು ಮಾಡಲಾಗಿದೆ.

ಶಾಂತಾ ಜಿ.ಕುಂದರ್‌ ಸೋಮವಾರ ಕೃಷ್ಣಮಠಕ್ಕೆ ಬಂದು ದೇವರ ದರ್ಶನ ಪಡೆದು ಊಟ ಮಾಡಿದ ಬಳಿಕ ಸುತ್ತಾಡುವಾಗ ಕಳ್ಳರು ಪರ್ಸ್‌ ಎಗರಿಸಿದ್ದಾರೆ.


ಪರ್ಸ್‌ನಲ್ಲಿ ₹ 1,40,000 ಮೌಲ್ಯದ 30 ಗ್ರಾಂ ಹವಳದ ಸರ, ಆಧಾರ್‌ಕಾರ್ಡ್‌, ಪಾನ್‌ಕಾರ್ಡ್‌, ಎಟಿಎಂ ಕಾರ್ಡ್‌ ಹಾಗೂ ₹ 4,000 ನಗದು ಇತ್ತು.

ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo