Slider

ಬೈಂದೂರು:-ವಿದ್ಯುತ್ ತಗುಲಿ ಕಾಲೇಜು ವಿದ್ಯಾರ್ಥಿ ಸಾವು 26-4-2022

 


ಬೈಂದೂರು : ವಿದ್ಯುತ್ ತಂತಿ ತಗಲಿದ ಪರಿಣಾಮ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಕೆರ್ಗಾಲ್ ಗ್ರಾ.ಪಂ. ವ್ಯಾಪ್ತಿಯ ನಾಯ್ಕನಕಟ್ಟೆಯಲ್ಲಿ ಸಂಭವಿಸಿದೆ . 


ಬಿಜೂರು ಗ್ರಾಮದ ನೆಲ್ಲಿಹರು ನಿವಾಸಿ ವಸಂತಿ ಶೆಟ್ಟಿ ಅವರ ಪುತ್ರ ಚೇತನ್ ಶೆಟ್ಟಿ ( 16 ) ಮೃತಪಟ್ಟವರು . ಉಪ್ಪುಂದದಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಚೇತನ್ ಶೆಟ್ಟಿ ಕಾಲೇಜಿಗೆ ರಜೆ ಇರುವುದರಿಂದ ಹೊಸ್ಕೋಟೆಯಲ್ಲಿ ಶಾಮಿಯಾನ ಕೆಲಸಕ್ಕೆ ಸೇರಿಕೊಂಡಿದ್ದರು . ನಾಯ್ಕನಕಟ್ಟೆ ಮನೆಯೊಂದರಲ್ಲಿ ಉಪನಯನ ಕಾರ್ಯಕ್ರಮ ಇದ್ದುದರಿಂದ ಕಬ್ಬಿಣದ ಏಣಿಯ ಮೇಲೆ ನಿಂತು ಶಾಮಿಯಾನ ಅಳವಡಿಸುತ್ತಿರುವಾಗ ಶಾಮಿಯಾನದ ಸುತ್ತ ಹಾಕಿರುವ ಲೈಟಿಂಗ್ ವಯರ್‌ನಲ್ಲಿ ಇದ್ದ ಗುಂಡು ಪಿನ್ ಆಕಸ್ಮಿಕವಾಗಿ ಅವರ ಎದೆಯ ಬಳಿಗೆ ತಾಗಿ ವಿದ್ಯುತ್ ಶಾಕ್ ತಗಲಿದ ಪರಿಣಾಮ ಕೆಳಕ್ಕೆ ಬಿದ್ದಿದ್ದಾರೆ . ತತ್‌ಕ್ಷಣ ಕುಂದಾಪುರ ಆಸ್ಪತ್ರೆಗೆ ಸಾಗಿಸಲಾಗಿದ್ದು , ಪರೀಕ್ಷಿಸಿದ ವೈದರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ . ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ 





.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo