ಮಂಗಳೂರು : ಬಾಲಕಿಗೆ ಮೊಬೈಲ್ ನಂಬರ್ ಕೊಟ್ಟ ಆರೋಪದಲ್ಲಿ ಕಂಡಕ್ಟರ್‌ನನ್ನು ಬಸ್ ನಿಂದ ಇಳಿಸಿದ ಬಾಲಕಿಯ ತಾಯಿ ಕಂಡಕ್ಟರ್ ಗೆ ಹೊಡೆದ ಘಟನೆ ನಗರದ ಬೋಂದೆಲ್‌ನಲ್ಲಿ ನಡೆದಿದೆ.
ಆರೋಪಿ ಬಸ್ ಕಂಡೆಕ್ಟರ್ ಬಾಲಕಿಗೆ ತನ್ನ ಮೊಬೈಲ್ ನಂಬರ್ ನೀಡಿದ್ದಲ್ಲದೆ ಕರೆ ಮಾಡಿ ಮಾತನಾಡಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.
ವಿಷಯ ತಿಳಿದ ಬಾಲಕಿಯ ತಾಯಿ ಬೋಂದೆಲ್‌ನಲ್ಲಿ ಬಸ್ಸನ್ನು ತಡೆದು ನಿಲ್ಲಿಸಿ ಕಂಡೆಕ್ಟರ್‌ನನ್ನು ಕೆಳಗಿಳಿಸಿ ಹಲ್ಲೆ ನಡೆಸಿ ತರಾಟೆಗೈಯ್ಯುವ ದೃಶ್ಯ ವೈರಲ್ ಆಗಿದೆ.
ಏಟು ತಿಂದ ಕಂಡಕ್ಟರ್ ಬಾಲಕಿಗೆ ಕೆಲವು ದಿನಗಳ ಹಿಂದೆ ಮೊಬೈಲ್ ನಂಬರ್ ನೀಡಿದ್ದ ಎನ್ನಲಾಗಿದ್ದು, ಬಸ್ ನಿಂದ ಕೆಳಗಿಳಿಸಿ ಆತನಿಗೆ ಬಾಲಕಿಯ ತಾಯಿ ಹಿಗ್ಗಾಮುಗ್ಗಾ ಥಳಿಸಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
8ನೇ ತರಗತಿ ಓದುತ್ತಿರುವ ಬಾಲಕಿ ಬಸ್‌ನಲ್ಲಿ ಪ್ರಯಾಣಿಸಿದ ಮೊದಲ ದಿನದಂದೇ ಕಂಡೆಕ್ಟರ್ ತನ್ನ ಮೊಬೈಲ್ ನಂಬರ್ ಕೊಟ್ಟಿದ್ದ ಎಂದು ಹೇಳಲಾಗಿದೆ. ಈ ವಿಚಾರವನ್ನು ಬಾಲಕಿ ಮನೆಯಲ್ಲಿ ತಿಳಿಸಿದ್ದು, ಆಕ್ರೋಶಗೊಂಡ ಬಾಲಕಿಯ ತಾಯಿ ಕಂಡೆಕ್ಟರ್‌ಗೆ ಹಲ್ಲೆಗೈದು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಸದ್ಯ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ