Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಮಣಿಪಾಲ:-ಸ್ಥಳೀಯರಲ್ಲಿ ಕುತೂಹಲಕ್ಕೆ ಕಾರಣವಾದ ರಸ್ತೆ ಕಾಮಗಾರಿ ವೇಳೆ ಪತ್ತೆಯಾದ ಸುರಂಗ23-4-2022

 


ಮಣಿಪಾಲ : ಪರ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಸುರಂಗ ಪತ್ತೆ ಯಾಗಿದ್ದು, ಇದು ಸ್ಥಳೀಯರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.ಇಲ್ಲಿನ ರಾಷ್ಟ್ರೀಯ ಹೆದ್ದಾರಿ 169 a ರಸ್ತೆ ಕಾಮಗಾರಿ ವೇಳೆ ಈ ಸುರಂಗ ಪತ್ತೆಯಾಗಿದೆ.


ಈಗಾಗಲೇ ಇತಿಹಾಸ ಮತ್ತು ಪ್ರಾಚ್ಯಸಂಶೋಧಕರಾದ ಪ್ರೊಫೆಸರ್ ಟಿ ಮುರುಗೇಶಿ ಅವರಿಗೆ ಮಾಹಿತಿ ನೀಡಲಾಗಿದ್ದು ಸ್ಥಳ ಪರಿಶೀಲನೆ ನಂತರ ಇದರ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬಹುದು . ಕೆಳಪರ್ಕಳದ ಅರ್ಧ ಕಿಲೋಮೀಟರ್ ದೂರದ ಪ್ರದೇಶದಲ್ಲಿ ನೂರೊಂದು ಬಾವಿಗಳು ಕಾಣಸಿಗುತ್ತವೆ , ಆ ಪ್ರದೇಶಕ್ಕೆ ಭೇಟಿ ನೀಡಿದಾಗ ನನಗೆ 36 ಬಾವಿಗಳು ಕಂಡಿವೆ ಎಂದು ಸ್ಥಳೀಯರಾದ ಗಣೇಶ್ ರಾಜ್ ಸರಳೆಬೆಟ್ಟು ತಿಳಿಸಿದ್ದಾರೆ.ಇದೀಗ ಈ ಸುರಂಗದ ಕುರಿತು ಸ್ಥಳೀಯರಲ್ಲಿ ಕುತೂಹಲ ಹೆಚ್ಚಿದೆ .





0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo