ಮಂಗಳೂರು,ಏ.22- ಮಂಗಳೂರಿನ ಹೊರವಲಯದಲ್ಲಿರುವ ಹಳೇ ಮಸೀದಿಯ ಕೆಳಗೆ ಹಿಂದೂ ದೇವಾಲಯದಂತಹ ವಾಸ್ತುಶಿಲ್ಪದ ವಿನ್ಯಾಸ ಪತ್ತೆಯಾಗಿದ್ದು, ಈ ಸ್ಥಳದಲ್ಲಿ ಹಿಂದೂ ದೇವಾಲಯ ಅಸ್ತಿತ್ವದಲ್ಲಿದ್ದ ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಮಂಗಳೂರು ಹೊರವಲಯದ ಮಳಲಿಯ ಜುಮಾ ಮಸೀದಿಯ ನವೀಕರಣ ಕಾಮಗಾರಿ ವೇಳೆ ಈ ಬೆಳವಣಿಗೆ ಗಮನಕ್ಕೆ ಬಂದಿದೆ. ವಿಶ್ವ ಹಿಂದೂ ಪರಿಷತ್ (ವಿಎಚ್‍ಪಿ) ಮುಖಂಡರು ದಾಖಲೆಗಳನ್ನು ಪರಿಶೀಲಿಸುವವರೆಗೆ ಕಾಮಗಾರಿಯನ್ನು ನಿಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಈ ನಡುವೆ ಮುಂದಿನ ಆದೇಶದವರೆಗೆ ರಚನೆಯ ಯಥಾಸ್ಥಿತಿ ಕಾಯ್ದುಕೊಳ್ಳಲು ದಕ್ಷಿಣ ಕನ್ನಡ ಕಮಿಷನರೇಟ್ ಆದೇಶಿಸಿದ್ದು, ಆಡಳಿತವು ಭೂ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಜನರು ಶಾಂತಿ ಕಾಪಾಡುವಂತೆ ಮನವಿ ಮಾಡಿದೆ.
ಈ ಸಮಸ್ಯೆಯ ಬಗ್ಗೆ ಕ್ಷೇತ್ರ ಅಕಾರಿಗಳು ಮತ್ತು ಪೊಲೀಸ್ ಇಲಾಖೆಯಿಂದ ಮಾಹಿತಿ ಬಂದಿದೆ. ಜಿಲ್ಲಾಡಳಿತವು ಹಳೆಯ ಭೂ ದಾಖಲೆಗಳು ಮತ್ತು ಮಾಲೀಕತ್ವದ ವಿವರಗಳಿಗೆ ಸಂಬಂಧಿಸಿದಂತೆ ನಮೂದುಗಳನ್ನು ಪರಿಶೀಲಿಸುತ್ತಿದ್ದು, ಧಾರ್ಮಿಕ ಮತ್ತು ದತ್ತಿ ಇಲಾಖೆ ಹಾಗೂ ವಕ್ ಮಂಡಳಿಯಿಂದ ವರದಿ ಪಡೆದುಕೊಳ್ಳುತ್ತೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ.ಕೆ.ವಿ. ತಿಳಿಸಿದ್ದಾ
ರೆ
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ