ಉಡುಪಿ: ಇವತ್ತು ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಪ್ರಾರಂಭಗೊಂಡಿದೆ.ಹಿಜಾಬ್ ಹೋರಾಟಗಾರ್ತಿಯರ ಪೈಕಿ ಇಬ್ಬರು ಕೊನೆಗಳಿಗೆಯಲ್ಲಿ ಹಾಲ್ ಟಿಕೆಟ್ ಪಡೆದು ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದರು. ಬಳಿಕ ಅಲ್ಲಿ ತಮಗೆ ಹಿಜಾಬ್ ಹಾಕಿ ಪರೀಕ್ಷೆಗೆ ಅವಕಾಶ ಕಲ್ಪಿಸಬೇಕು ಎಂದು ಹಠ ಹಿಡಿದಿದ್ದರು.
ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಶಾಸಕ ರಘುಪತಿ ಭಟ್, ನಾಳೆಯಿಂದ ನಿಯಮ ಪ್ರಕಾರ ಎಲ್ಲರೂ ಪರೀಕ್ಷೆಗೆ ಬರಬೇಕು. ನ್ಯಾಯಾಲಯದ ತೀರ್ಪಿನ ಪ್ರಕಾರ ಹಿಜಾಬ್ ತೆಗೆದು ಪರೀಕ್ಷೆ ಬರೆಯಬೇಕು. ಸುಮ್ಮನೆ ಬಂದು ಡ್ರಾಮಾ ಮಾಡಿದರೆ ಕ್ರಿಮಿನಲ್ ಕೇಸ್ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಶಾಸಕರು, ಇವತ್ತು ಪರೀಕ್ಷಾ ಕೇಂದ್ರಕ್ಕೆ ಬಂದು ಇಬ್ಬರು ಹಿಜಾಬ್ ಧಾರಿಗಳು ಡ್ರಾಮಾ ಮಾಡಿದ್ದಾರೆ .ಇವರ ಉದ್ದೇಶ ಅಶಾಂತಿ ಸೃಷ್ಟಿಸುವುದಾಗಿದೆ. ಈತನಕ ಇವರನ್ನು ಮುಗ್ಧ ಮಕ್ಕಳು ಎಂದು ಹೇಳುತ್ತಿದ್ದೆವು. ಆದರೆ ಇವರ ಉದ್ದೇಶವೇ ಬೇರೆ ಇದೆ. ಇನ್ನು ಮುಂದೆ ಇದನ್ನು ಸಹಿಸಿಕೊಳ್ಳುವುದಿಲ್ಲ. ಪರೀಕ್ಷಾ ಕೇಂದ್ರಕ್ಕೆ ಬಂದು ಗಲಾಟೆ ಮಾಡಿದರೆ ಕಟಡಿಣ ಕ್ರಮ ಕೈಗೊಳ್ಳಲು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಶಾಸಕರು ವಾರ್ನಿಂಗ್ ಮಾಡಿದ್ದಾರೆ.
.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ