Slider


ಮಂಗಳೂರು:-ಮಸೀದಿ ನವೀಕರಣದ ವೇಳೆ ದೇಗುಲ ಕುರುಹು ಪತ್ತೆ ಪ್ರಕರಣ ಪ್ರವೇಶ ನಿರಾಕರಿಸಿ ಕೋರ್ಟ್ ಆದೇಶ 22-4-2022

 


ಮಂಗಳೂರು: ಮಸೀದಿ ನವೀಕರಣದ ವೇಳೆ ಪ್ರಾಚೀನ ಶೈಲಿಯ ಕಟ್ಟಡ ಪತ್ತೆಯಾದ ಹಿನ್ನೆಲೆಯಲ್ಲಿ ಕಟ್ಟಡ ಪ್ರವೇಶಿಸದಂತೆ ಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ‌ನೀಡಿದೆ


.ಮಂಗಳೂರು ತಾಲೂಕಿನ ಮಳಲಿಯಲ್ಲಿರುವ ಸರ್ವೇ ನಂ 1/10 ನಲ್ಲಿ ಅಸ್ಸಾಯಿದ್ ಅಬ್ದುಲ್ಲಾಹಿಲ್ ಮದನಿ ಜುಮಾ ಮಸೀದಿ ಕಟ್ಟಡ ನವೀಕರಣ ಸಂದರ್ಭದಲ್ಲಿ ಕಟ್ಟಡ ಕೆಡವಿದಾಗ ಪ್ರಾಚೀನ ಶೈಲಿಯ ಕಟ್ಟಡದ ಕುರುಹುಗಳು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.



ಇದೀಗ ಗಂಜಿಮಠ ನಿವಾಸಿಯಾದ ಧನಂಜಯ ಅವರು ಮಂಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ಇದನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯವು ದೇವಸ್ಥಾನದಂತೆ ಹೋಲುವ ಸದ್ರಿ ಕಟ್ಟಡದಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ಮತ್ತು ಕಟ್ಟಡಕ್ಕೆ ಯಾವುದೇ ಹಾನಿ ಮಾಡದಂತೆ ತಡೆಯಾಜ್ಞೆ ನೀಡಿದೆ. ಆ ಕಟ್ಟಡದ ಒಳಗಡೆ ಮಸೀದಿ ಕಮಿಟಿಯವರಾಗಲಿ ಮತ್ತು ಅನುಯಾಯಿಗಳಿಗೆ ಪ್ರವೇಶ ನಿಷೇಧಿಸಿ ಆದೇಶಿಸಿದೆ. ಮುಂದಿನ ವಿಚಾರಣೆಯನ್ನು ಜೂನ್ 3 ಕ್ಕೆ ನಿಗದಿಪಡಿಸಲಾಗಿದೆ.





.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo