ಉಡುಪಿ : ದ್ವೀತಿಯ ಪಿಯುಸಿ ಅಂತಿಮ ಹಂತದ ಪರೀಕ್ಷೆಯಲ್ಲಿ ಮತ್ತೆ ಹಿಜಾಬ್ ಗೆ ಅವಕಾಶಕ್ಕೆ ವಿಧ್ಯಾರ್ಥಿನಿಯರು ಮನವಿ ಮಾಡಿದ್ದು ಆದರೆ ರಾಜ್ಯ ಸರಕಾರದ ಆದೇಶ ಹಿನ್ನಲೆ ಹಿಜಾಬ್ ಗೆ ಅವಕಾಶ ನಿರಾಕರಿಸಲಾಗಿದ್ದು ಹಿಜಾಬ್ ಹೋರಾಟಗಾರ್ತಿಯರು ಪರೀಕ್ಷೆ
ಬರೆಯದೆ ಮನೆಗೆ ತೆರಳಿದ್ದಾರೆ.
ಉಡುಪಿಯ ವಿದ್ಯೋದಯ ಪದವಿ ಪೂರ್ವ ಕಾಲೇಜಿಗೆ ಹಿಜಾಬ್ ಹೋರಾಟದ ವಿಧ್ಯಾರ್ಥಿನಿಯರು ಆಗಮಿಸಿದ್ದು ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೇಳಿದ್ದಾರೆ. ಆದರೆ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಅರ್ಚನಾ ಭಟ್ ಹಾಗೂ ಪರೀಕ್ಷಾ ಸಿಬ್ಬಂದಿ ಹಿಜಾಬ್ ಧರಿಸಿ ಪರೀಕ್ಷೆಗೆ ಅವಕಾಶ ನೀಡಿಲ್ಲ. ಈ ಹಿನ್ನಲೆ ಇಬ್ಬರು ವಿಧ್ಯಾರ್ಥಿನಿಯರು ಪರೀಕ್ಷೆ ಬರೆಯದೇ ತೆರಳಿದ್ದಾರೆ.
ಕಾಮರ್ಸ್ ವಿಭಾಗದ ಪರೀಕ್ಷೆ ಕೇಂದ್ರ ಉಡುಪಿ ವಿದ್ಯೋದಯ ಕಾಲೇಜಿನಲ್ಲಿದೆ. ಕಾಲೇಜಿನ ಒಳಗಡೆ ಪರೀಕ್ಷೆ ಬರೆಯುವಾಗ ಮಾತ್ರ ಹಿಜಾಬ್ ತೆಗೆಯಲು ಆದೇಶವಿದೆ. ಹೀಗಾಗಿ ಹಲವಾರು ಮುಸ್ಲಿಮ್ ವಿದ್ಯಾರ್ಥಿನಿಯರು ಕೇಂದ್ರಕ್ಕೆ ಬುರ್ಕಾ, ಹಿಜಾಬ್ ಧರಿಸಿಕೊಂಡು ಆಗಮಿಸಿದ್ದರು. ಕೇಂದ್ರದಲ್ಲಿ ಒಂದು ಕೊಠಡಿ ಇದ್ದು ಅಲ್ಲಿ ಹಿಜಾಬ್, ಬುರ್ಕಾ ತೆಗೆದು ಪರೀಕ್ಷಗೆ ಹಾಜರಾಗಬೇಕು.
ತಮ್ಮ ಕಾಲೇಜಿನಲ್ಲಿ ಬೆಳಗ್ಗೆ 10:00 ಗಂಟೆಗೆ ಹಾಲ್ ಟಿಕೆಟ್ ಪಡೆದ ಇಬ್ಬರು ರಿಕ್ಷಾ ಮೂಲಕ ವಿದ್ಯೋದಯ ಕಾಲೇಜಿಗೆ ಆಗಮಿಸಿದ್ದರು. ಕಾಲೇಜಿಗೆ ಬಂದ ಬಳಿಕ ಈ ಇಬ್ಬರೂ ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಈ ವಿಚಾರ ತಿಳಿದು ಉಡುಪಿಯ ತಹಶೀಲ್ದಾರ್ ಅರ್ಚನಾ ಭಟ್ ಪರೀಕ್ಷಾ ಕೇಂದ್ರಕ್ಕೆ ಬಂದು ವಿದ್ಯಾರ್ಥಿನಿಯರ ಮನ ಒಲಿಸುವ ಪ್ರಯತ್ನ ಮಾಡಿದ್ದರು. ಆದರೆ ಹಿಜಾಬ್ ಮುಖ್ಯ ಎಂಬ ಹಠಕ್ಕೆ ಬಿದ್ದ ವಿದ್ಯಾರ್ಥಿನಿಯರು ಕೊನೆಗೆ ಪರೀಕ್ಷಾ ಕೇಂದ್ರದಿಂದ ಮನೆ ಕಡೆ ತೆರಳಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ