ಬೈಂದೂರು : ಇಲ್ಲಿನ ಕೊಲ್ಲೂರು ಗ್ರಾಮದ ಹೆಗ್ಡೆಹಕ್ಕು ನಿವಾಸಿ ಸುನೀತಾ ( 22 ) ಎಂಬ ಯುವತಿ ಏಪ್ರಿಲ್ 20 ರ ಬೆಳಿಗ್ಗೆ ಸುಮಾರು 11 : 30 ಕ್ಕೆ ಕೆಲಸಕ್ಕೆ ತೆರಳಿದ್ದು ವಾಪಸ್ಸು ಮನೆಗೆ ಬಾರದೇ ನಾಪತ್ತೆಯಾಗಿರುತ್ತಾಳೆ .
5 ಅಡಿ 4 ಇಂಚು ಏತ್ತರ , ಕಪ್ಪು ಮೈಬಣ್ಣ ಹೊಂದಿರುವ ಈಕೆ ಕನ್ನಡ , ತೆಲುಗು , ಹಾಗೂ ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ.ಒಂದು ವೇಳೆ ಈ ಯುವತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ತಕ್ಷಣ ಕೊಲ್ಲೂರು ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ : 08254-258233 ಅನ್ನು ಸಂಪರ್ಕಿಸುವಂತೆ ಕೊಲ್ಲೂರು ಪೊಲೀಸ್ ಠಾಣೆ ಉಪನಿರೀಕ್ಷಕರು ತಿಳಿಸಿದ್ದಾರೆ .
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ