ಮಣಿಪಾಲ : ಆರ್ಡರ್ ಮಾಡಿದ ಬಿರಿಯಾನಿ ತಡವಾಗಿ ಕೊಟ್ಟರು ಎಂಬ ಕಾರಣಕ್ಕೆ ಭೂಪನೊಬ್ಬ ಹೊಟೇಲ್ ಮಾಲೀಕನಿಗೇ ಸ್ಯಾನಿಟೈಸರ್ ಸ್ಟ್ಯಾಂಡ್ ನಿಂದ ಹಲ್ಲೆ ನಡೆಸಿರುವ ಘಟನೆ ಮಣಿಪಾಲದಲ್ಲಿ ರಾತ್ರಿ ನಡೆದಿದೆ .
ಮಣಿಪಾಲದ ಡಿಷಸ್ ಹೊಟೇಲಿನಲ್ಲಿ ರಾತ್ರಿ ಹನ್ನೊಂದು ಘಂಟೆಗೆ ಪಡುಕೆರೆಯ ನಂದನ್ ಎನ್ನುವಾತ ಬಿರಿಯಾನಿ ಅರ್ಡರ್ ಮಾಡಿದ್ದ , ಈ ಸಂದರ್ಭದಲ್ಲಿ ಬಿರಿಯಾನಿ ನೀಡಲು ತಡವಾಗಿದ್ದಕ್ಕೆ ಏಕಾ ಏಕಿ ಏರುದನಿಯಲ್ಲಿ ಯಾಕೆ ಲೇಟು ಅನ್ನುತ್ತಾ ಗಲಾಟೆ ಶುರು ಮಾಡಿದಾಗ ಗ್ರಾಹಕನನ್ನು ಹೊಟೇಲ್ ಮಾಲೀಕ ಸಮಾಧಾನಪಡಿಸಿದ್ದಾರೆ .
ಇಷ್ಟಕ್ಕೆ ಸಮಾಧಾನಗೊಳ್ಳದ ಗ್ರಾಹಕ ನಂದನ್ ಎಂಬಾತ ಅಲ್ಲಿದ್ದ ಸ್ಯಾನಿಟೈಸರ್ ಸ್ಟ್ಯಾಂಡ್ ಹಿಡಿದು ನಿನ್ನನ್ನು ಮುಗಿಸಿ ಬಿಡುತ್ತೇನೆ ಎಂದು ಹೇಳುತ್ತಾ ಹಲ್ಲೆ ಮಾಡಿದ್ದಾನೆ.ಇದರಿಂದಾಗಿ ಹೊಟೇಲ್ ಮಾಲೀಕನ ಎಡಕೈಗೆ ಗಾಯವಾಗಿದೆ . ತಡೆಯಲು ಹೋದ ಕೆಲಸಗಾರನ ಮೇಲೆಯೂ ಹಲ್ಲೆ ನಡೆಸಿದ್ದಾನೆ
ಹಲ್ಲೆ ನಡೆಸಿರುವ ನಂದನ್ ಪಡುಕೆರೆ ಎನ್ನುವ ಗ್ರಾಹಕನ ವಿರುದ್ಧ ಹೊಟೇಲ್ ಮಾಲೀಕ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ .
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ