Slider

ಮಹಿಳಾ ಪ್ರೊಫೆಸರ್​ವೊಬ್ಬರ ಫೋನ್ ನಂಬರ್ ಪಬ್ಲಿಕ್ ಟಾಯ್ಲೆಟ್​ನಲ್ಲಿ ಬರೆದು ಮಾನಸಿಕ ಕಿರುಕುಳ, ಮೂವರು ಶಿಕ್ಷಕರ ಬಂಧನ20-4-2022

 


ಮಂಗಳೂರು : ಹಿರಿಯ ಮಹಿಳಾ ಪ್ರೊಫೆಸರ್​ವೊಬ್ಬರ ಫೋನ್ ನಂಬರ್ ಪಬ್ಲಿಕ್ ಟಾಯ್ಲೆಟ್​ನಲ್ಲಿ ಬರೆದು ಮಾನಹಾನಿಕಾರ ಪತ್ರ, ಪೋಸ್ಟರ್​ ಅಂಟಿಸಿ ಮಾನಸಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಟ್ವಾಳದ ಖಾಸಗಿ ಕಾಲೇಜಿನ ಮೂವರು ಶಿಕ್ಷಕರನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್, ಬಂಟ್ವಾಳ ಖಾಸಗಿ ಕಾಲೇಜಿನ ಪ್ರೊಫೆಸರ್ ಆಗಿ ಸದ್ಯ ಡೆಪ್ಯುಟೇಶನ್​ನಲ್ಲಿರುವ ಮಹಿಳಾ ಪ್ರೊಫೆಸರ್ ವಿರುದ್ದ ಆರಂಭದಲ್ಲಿ ಅವರ ಪರಿಚಯದ ಶಿಕ್ಷಕರಿಗೆ, ಶಿಕ್ಷಣ ಇಲಾಖೆಯ ಉನ್ನತ ದರ್ಜೆ ಅಧಿಕಾರಿಗಳಿಗೆ ಆರೋಪಿಗಳು ಮಾನಹಾನಿಕಾರ ಪತ್ರವನ್ನು ಬರೆದಿದ್ದರು.



ಆ ಬಳಿಕ ವಿವಿಧ ಕಡೆಯ ಪಬ್ಲಿಕ್ ಟಾಯ್ಲೆಟ್​ನಲ್ಲಿ ಈ ಪ್ರೊಫೆಸರ್ ಫೋನ್ ನಂಬರ್ ಹಾಕಿ ಇವರು ಕಡಿಮೆ ದರದಲ್ಲಿ ವೇಶ್ಯಾವಾಟಿಕೆ ಮಾಡುತ್ತಾರೆ ಎಂದು ಬರೆದಿದ್ದರು ಅಂತಾ ತಿಳಿಸಿದರು. ಅಲ್ಲದೇ, ವಿವಿಧ ಕಡೆ ಅಶ್ಲೀಲವಾಗಿ ಬರೆದು ಪೋಸ್ಟರ್​ಗಳನ್ನು ಹಾಕಿದ್ದರು.


ಸುಮಾರು ಒಂದು ವರ್ಷದಿಂದ ಇಂತಹ ಮಾನಹಾನಿಯಿಂದ ನೊಂದ ಶಿಕ್ಷಕಿ ಮಂಗಳೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಬೆಳ್ತಂಗಡಿ ತಾಲೂಕಿನ ಲಾಯಿಲದ ಪ್ರಕಾಶ್ ಶೆಣೈ, ಬಂಟ್ವಾಳ ಸಿದ್ದಕಟ್ಟೆಯ ಪ್ರದೀಪ್ ಪೂಜಾರಿ, ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ನಡ್ಪಾಲುವಿನ ತಾರಾನಾಥ ಬಿ.ಎಸ್.ಶೆಟ್ಟಿ ಎಂಬುವರನ್ನು ಬಂಧಿಸಲಾಗಿದೆ.


ಈ ಆರೋಪಿಗಳು ಬಂಟ್ವಾಳ ಖಾಸಗಿ ಕಾಲೇಜಿನ ಸಂಚಾಲಕ ಹಾಗೂ ಪ್ರಾಧ್ಯಾಪಕರುಗಳಾಗಿದ್ದಾರೆ. ಆದರೆ, ಈ ಕೃತ್ಯವೆಸಗಲು ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂತ್ರಸ್ತ ಮಹಿಳಾ ಪ್ರೊಫೆಸರ್, ನನ್ನ ಬಗ್ಗೆ ಮಾನಹಾನಿಕರ ಪತ್ರ ಬರೆದಂದಿನಿಂದ ನೆಮ್ಮದಿ ಇಲ್ಲದಂತಾಗಿದೆ. ಪೊಲೀಸರಿಗೆ ದೂರು ನೀಡಿದ ಬಳಿಕ ಧೈರ್ಯ ತುಂಬಿದರು. ದೂರು ನೀಡುವಾಗಲೇ ಇವರ ಬಗ್ಗೆ ಪೊಲೀಸರಲ್ಲಿ ಅನುಮಾನ ವ್ಯಕ್ತಪಡಿಸಿದ್ದೆ. ಅದೀಗ ನಿಜವಾಗಿದೆ ಎಂದರು.




0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo