ಹೆಬ್ರಿ : ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಯುತಿಯೊಬ್ಬಳು ತನ್ನ ಪ್ರಿಯಕರ ಪೋನ್ ಕರೆ ಸ್ವೀಕರಿಸಿಲ್ಲವೆಂಬ ಕಾರಣಕ್ಕೆ ವಿಷ ಪದಾರ್ಥ ಸೇವೆಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿ ಪ್ರಿಯತಮೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಹೆಬ್ರಿಯ ಸಂತೆಕಟ್ಟೆಯಲ್ಲಿ ಸಂಭವಿಸಿದೆ.
ಮೃತಪಟ್ಟ ಯುವತಿಯು ಕುಸುಮಾ ಎಂದು ತಿಳಿದು ಬಂದಿದೆ.
ಈಕೆ ಹೆಬ್ರಿ ಸಂತೆಕಟ್ಟೆಯಲ್ಲಿ ಹೋಂ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದು ಚಿಕ್ಕ ಮಗಳೂರು ಜಿಲ್ಲೆಯ ಯುವಕನನ್ನು ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಈಕೆ ಕರೆ ಮಾಡಿದಾಗ ಆತನು ಆಕೆಯ ಪೋನ್ ಕರೆಯನ್ನು ಸ್ವೀಕರಿಸದ ಕಾರಣ ಹಾಗೂ ಇನ್ನು ಮುಂದಕ್ಕೆ ಆತನು ತನಗೆ ಸಿಕ್ಕುವುದಿಲ್ಲವೆಂದು ಬೇಸರಗೊಂಡು ಭಾನುವಾರ ಬೆಳಿಗ್ಗೆ ವಿಷ ಪದಾರ್ಥವನ್ನು ಹಾಲಿನಲ್ಲಿ ಬೆರೆಸಿ ಕುಡಿದಿದ್ದರು.
ನಂತರ ಅಜ್ಜರಕಾಡು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ