ಉಡುಪಿ, ಎಪ್ರಿಲ್ 19: ಕಾಲೇಜು ಬಿಟ್ಟು ಮನೆಗೆ ಮರಳುತ್ತಿದ್ದ ವಿದ್ಯಾರ್ಥಿನಿಗೆ ಹಾಡಹಗಲೇ ರಸ್ತೆಯಲ್ಲೇ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದ ಕಾಮುಕನಿಗೆ ಸಾರ್ವಜನಿಕರೇ ಹಿಡಿದು ಥಳಿಸಿದ ಘಟನೆ ಉಡುಪಿಯ ಪುರಭವನದ ಬಳಿ ಇಂದು ನಡೆದಿದೆ.
ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳ ಮೇಲೆ ನೀಲ್ ಗಾಮಾ ಎಂಬ ಯುವಕ ಕಿರುಕುಳ ನೀಡಲು ಮುಂದಾಗಿದ್ದಾನೆ.ಯುವತಿ ಬೊಬ್ಬೆ ಹಾಕಿದಾಗ ಸಹಾಯಕ್ಕಾಗಿ ಸಾರ್ವಜನಿಕರು ಧಾವಿಸಿ ಬಂದು ಆತನನ್ನು ಹಿಡಿದು ಚೆನ್ನಾಗಿ ಧರ್ಮದೇಟು ನೀಡಿದ್ದಾರೆ.
ಬಳಿಕ ಕಜ್ಜಾಯ ಕೊಟ್ಟು ಪೊಲೀಸ್ ಜೀಪು ಹತ್ತಿಸಿದ್ದಾರೆ. ಬಳಿಕ ಆರೋಪಿಯನ್ನು ಉಡುಪಿ ಮಹಿಳಾ ಠಾಣೆಗೆ ಒಪ್ಪಿಸಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ