ಸಾಮಾಜಿಕವಾಗಿ , ಧಾರ್ಮಿಕವಾಗಿ ಮತ್ತು ಶೈಕ್ಷಣಿಕವಾಗಿ ಗುರುತಿಸಿಕೊಂಡಿದ್ದ ಬನ್ನಂಜೆ ಶ್ರೀ ಶಿವರಾಮ್ ರವರು ಇಂದು ಮುಂಜಾನೆ ಅಲ್ಪಕಾಲದ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ.
ಕನ್ಯಾಡಿ ಶ್ರೀ ರಾಮ ಮಹಾ ಸಂಸ್ಥಾನಮ್ ಇದರ ನಿಕಟಪೂರ್ವ ಪೀಠಾಧಿಪತಿಗಳಾದ ಕೀರ್ತಿಶೇಷ ಶ್ರೀ ಆತ್ಮಾನಂದ ಸ್ವಾಮೀಜಿಗಳ ಆಪ್ತ ಶಿಷ್ಯವರ್ಗದಲ್ಲಿ ಗುರುತಿಸಿಕೊಂಡಿದ್ದ ಬನ್ನಂಜೆ ಶ್ರೀ ಶಿವರಾಮ್ ರವರು . ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಉಂಟಾದ ಆನೇಕ ಎಡರು ತೊಡರುಗಳನ್ನು ಮೆಟ್ಟಿ ನಿಂತು ದಕ್ಷಿಣ ಭಾರತದ ಅಯೋಧ್ಯೆ ಎಂಬ ರೀತಿಯಲ್ಲಿ ನಿರ್ಮಾಣಗೊಳಿಸಿದ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮಿಗಳ ಕರ್ತೃತ್ವದ ಶಕ್ತಿಗೆ ದೊಡ್ಡ ಮಟ್ಟದ ಬೆಂಗಾವಲಾಗಿ ನಿಂತವರು.
ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಪ್ರತಿಷ್ಠಾನ ಆದಿ ಉಡುಪಿ ಇಲ್ಲಿಯ ಸ್ಥಾಪಕರಲ್ಲೊಬ್ಬರಾದ ಶ್ರೀ ಶಿವರಾಮ್ ರವರು ಬನ್ನಂಜೆ ಬಾಬು ಅಮೀನ್ ಹಾಗೂ ಪ್ರೊ. ಮೋಹನ್ ಕೋಟ್ಯಾನ್ ರವರ ತುಳುನಾಡ ಗರೋಡಿಗಳ ಸಾಂಸ್ಕ್ರತಿಕ ಅಧ್ಯಯನ ಎಂಬ ಸಂಶೋಧನ ಗ್ರಂಥ ರಚಿಸುವಲ್ಲಿ ಮಹತ್ವದ ಸಹಕಾರವನ್ನು ನೀಡಿರುವುದಲ್ಲದೆ, 'ಬೈದಶ್ರೀ' ಎಂಬ ಹೆಸರಿನಿಂದ ನಿರ್ಮಿಸಿದ ಸ್ವಂತ ಕಟ್ಟಡ ನಿರ್ಮಾಣದಲ್ಲಿಯೂ ಕೂಡಾ ಶ್ರಮಿಸಿದವರು.
ಬನ್ನಂಜೆ ಬಿಲ್ಲವ ಸಮಾಜ ಸಂಘದ ಮಂದಿರ ರಚನೆ ಹಾಗೂ ವಿವಿಧ ಕಲ್ಯಾಣ ಮಂಟಪಗಳ ರಚನೆ ಮತ್ತು ನವೀಕರಣ ಸಂಧರ್ಭದಲ್ಲಿ ಆರ್ಥಿಕ ಸಂಪನ್ಮೂಲದ ಕ್ರೋಢೀಕರಣಕ್ಕೆ ಹಾಗೂ ವಿದ್ಯಾರ್ಥಿ ವೇತನ ವಿತರಣೆಗೆ ಕೂಡಾ ಸಹಾಯ ಹಸ್ತವನ್ನು ನೀಡಿದವರು.
ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಶ್ರೀ ಶಿವರಾಮ್ ರವರು ಇಂದು ಮುಂಜಾನೆ ಶ್ರೀ ಅಸ್ತಂಗತರಾಗಿದ್ದಾರೆ.
ಮಾಹಿತಿ ಕೃಪೆ:- *ಪಾಂಡು ಕೆಳಾರ್ಕಳಬೆಟ್ಟು*
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ