ಉಡುಪಿ: ನಮ್ಮನ್ನು ಯಾರೂ ಕಮಿಷನ್ ಕೇಳಿಲ್ಲ, ದಿಂಗಾಲೇಶ್ವರ ಶ್ರೀಗಳಿಗೆ ಯಾರೋ ಪ್ರಚೋದಿಸುತ್ತಿದ್ದಾರೆಂದು ಉಡುಪಿ ಪಲಿಮಾರು ಮಠದ ವಿದ್ಯಾಧೀಶತೀರ್ಥರು ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ವಿದ್ಯಾಧೀಶತೀರ್ಥರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಪಲಿಮಾರು ಮಠಕ್ಕೆ ಧನಸಹಾಯ ಮಾಡಿದ್ದರು.
ಧನಸಹಾಯ ವೇಳೆ ಯಾರೂ ಕೂಡ ಫಲಾಪೇಕ್ಷೆ ಪಡೆದಿಲ್ಲ. ಶಾಸಕರು, ಮಂತ್ರಿಗಳು, ಮುಜರಾಯಿ ಎಲ್ಲೂ ಸ್ವಾರ್ಥ ಕಂಡುಬಂದಿಲ್ಲ. ಕೆಲವರ ಅಪಸ್ವರ ಸ್ವಂತದ್ದಲ್ಲ, ಯಾವುದೋ ಕಾರಣ ಇರಬಹುದು. ಮಠ-ಮಂದಿರಗಳಿಗೆ ಸರ್ಕಾರದ ಧನಸಹಾಯ ಒಳ್ಳೆಯದು. ತಪ್ಪು ಚಿಂತನೆ ಮಾಡುವುದು ಒಳ್ಳೆಯದಲ್ಲಿ ಎಂದು ಹೇಳಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ