ಮೂಡುಬಿದಿರೆ : ದಕ್ಷಿಣ ಕನ್ನಡ ಜಿಲ್ಲೆಯ ಅಪಘಾತ ವಲಯವೆಂದೇ ಪರಿಚಿತವಾಗಿರುವ ಮೂಡುಬಿದಿರೆ ಹೊರವಲಯದ ಕಲ್ಲಬೆಟ್ಟು ಗ್ರಾಮದ ಗಂಟಾಲ್ಕಟ್ಟೆಯಲ್ಲಿ ಸ್ಕೂಟಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ.
ಸಾವನ್ನಪ್ಪಿದವರು ಶಿರ್ತಾಡಿ ವಾಲ್ಪಾಡಿ ಪುದಡಿ ನಿವಾಸಿ ರಮೇಶ (38) ಎಂದು ತಿಳಿದು ಬಂದಿದೆ. ಇವರು ಕೂಲಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ.
ಗಂಟಾಲ್ಕಟ್ಟೆಯ ಹೋಟೆಲ್ ನಲ್ಲಿ ಚಹಾ ಸೇವಿಸಿ ಜತೆಗಾರನೊಂದಿಗೆ ಹೋಟೆಲ್ ನಿಂದ ಹೊರಟು ಸ್ಕೂಟಿಯಲ್ಲಿ ರಸ್ತೆ ತಲುಪುವಷ್ಟರಲ್ಲಿ ವೇಣೂರು ಕಡೆಯಿಂದ ಬಂದ ಬೈಕ್ ಸ್ಕೂಟಿಗೆ ಬಡಿದ ಪರಿಣಾಮ ಸ್ಕೂಟಿ ಮಗುಚಿ ಬಿತ್ತು. ತಲೆಗೆ ತೀವ್ರ ಏಟು ತಗಲಿದ ರಮೇಶ ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿಯಲಾಗಿದೆ.
ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ