Slider


ತಾಳಿ ಕಟ್ಟುವ ವೇಳೆ ಮದುವೆ ಇಷ್ಟವಿಲ್ಲ ಎಂದು ವಧು18-4-2022


 ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿನ ಒಂದರ ಸಭಾಭವನದಲ್ಲಿ ರವಿವಾರ ತಾಳಿ ಕಟ್ಟುವ ವೇಳೆ ವಧು ತನಗೆ ಈ ಮದುವೆ ಇಷ್ಟವಿಲ್ಲ ಎಂದ ಕಾರಣ ಮದುವೆಯೊಂದು ಮುರಿದು ಬಿದ್ದ ಘಟನೆ ನಡೆದಿದೆ.


ಮೂಲತಃ ಬ್ರಹ್ಮಾವರದವರಾಗಿದ್ದು ವರ ವಿದೇಶದಲ್ಲಿ ಕೆಲಸ ಮಾಡುತ್ತಿದ್ದ. ವಧು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಳು. ಸುಮಾರು 4 ತಿಂಗಳ ಹಿಂದೆ ನಿಶ್ಚಿತಾರ್ಥವಾಗಿತ್ತು ಎನ್ನಲಾಗಿದೆ.


ಇಬ್ಬರೂ ದೂರವಾಣಿ ಸಂಪರ್ಕದಲ್ಲಿದ್ದು‌ ಮಾತನಾಡುತ್ತಿದ್ದರು.

ಮದುವೆ ಕ್ರಮಗಳೆಲ್ಲ ಮುಂದುವರಿದು ತಾಳಿ ಕಟ್ಟುವ ಸಂದರ್ಭ ಬಂದಾಗ ವಧು, ವರನನ್ನು ಅಲ್ಲಿಯೇ ಕೊಠಡಿಗೆ ಕರೆದುಕೊಂಡು ಹೋಗಿ ತನಗೆ ಈ ಮದುವೆ ಇಷ್ಟವಿಲ್ಲ. ಬೇರೆ ಪ್ರಪೋಸಲ್‌ ಇಷ್ಟಪಟ್ಟಿರುವುದಾಗಿ ತಿಳಿಸಿದ್ದಾಳೆ ಎಂದು ತಿಳಿದು ಬಂದಿದೆ. ಸುಮಾರು 1,000 ಮಂದಿಗೆ ಊಟೋಪಾಚಾರದ ವ್ಯವಸ್ಥೆಯನ್ನೂ ಮಾಡಲಾಗಿತ್ತು.ಅಲ್ಲಿ ನೆರದಿದ್ದ ಜನರೆಲ್ಲ ಈ ವಧುವಿನ ನಿರ್ಧಾರಕ್ಕೆ ಆಶ್ಚರ್ಯ ಚಕಿತರಾಗಿದ್ದಾರೆ.


ಇಂತಹ ಘಟನೆಗಳು ಚಲನಚಿತ್ರ ಮತ್ತು ಧಾರಾವಹಿಗಳಲ್ಲಿ ಬರುತ್ತಿತ್ತು. ಆದರೆ ಈ ಘಟನೆ ನೈಜವಾಗಿ ನೋಡಿದ ಆಮಂತ್ರಿತರು ಆಶ್ಚರ್ಯಪಟ್ಟಿದ್ದಾರೆ. ಕೊನೆಗೆ ಬ್ರಹ್ಮಾವರ ಪೊಲೀಸರ ಮಧ್ಯಸ್ಥಿಕೆಯಲ್ಲಿ ಎರಡೂ ಕಡೆಯವರು ಖರ್ಚಿನ ಸಮಪಾಲು ಹಾಕಲು ಒಪ್ಪುವುದರೊಂದಿಗೆ ಪ್ರಕರಣ ಮುಕ್ತಾಯಗೊಂಡಿತು.




0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo