ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಆಳಸಮುದ್ರ ಬೋಟು ಮಹಾರಾಷ್ಟ್ರದ ರತ್ನಗಿರಿ ಸಮೀಪ ಮುಳುಗಡೆಗೊಂಡಿದ್ದು ಅದರಲ್ಲಿದ್ದ 7 ಮೀನುಗಾರರನ್ನು ರಕ್ಷಿಸಲಾಗಿದೆ.
ಕಡೆಕಾರು ಪಡುಕರೆ ಭಗವಾನ್‌ದಾಸ್ ಕೋಟ್ಯಾನ್ ಅವರಿಗೆ ಸೇರಿದ ದಿವ್ಯಶಕ್ತಿ ಆಳಸಮುದ್ರ ಬೋಟ್ ಎ.10ರಂದು ಮಲ್ಪೆಯಿಂದ ತೆರಳಿತ್ತು. ಎ. 13ರಂದು ರಾತ್ರಿ 9.30ರ ವೇಳೆಗೆ ರತ್ನಗಿರಿಯ ಸಮೀಪ ಮೀನುಗಾರಿಕೆ ನಡೆಸುತ್ತಿರುವಾಗ ಗಟ್ಟಿಯಾದ ವಸ್ತು ಬೋಟಿನ ತಳಭಾಗಕ್ಕೆ ತಾಗಿದ್ದು ಪರಿಣಾಮ ಬೋಟಿನ ಒಳಕ್ಕೆ ನೀರು ಬರಲಾರಂಭಿಸಿತು. ಸಮೀಪದಲ್ಲಿದ್ದ ನೀಲಾದ್ರಿ ಮತ್ತು ಸುವರ್ಣ ಛಾಯ ಬೋಟಿನವರಿಗೆ ಮಾಹಿತಿ ನೀಡಿದಾಗ, ತತ್‌ಕ್ಷಣ ಧಾವಿಸಿ ಬಂದ ಅವರು ಬೋಟಿನಲ್ಲಿದ್ದ ದೇವೇಂದ್ರ, ಸತೀಶ, ಮಾದಪ್ಪ, ನವೀನ, ಮಹೇಂದ್ರ, ಚಂದ್ರಕಾಂತ ಮತ್ತು ರವಿ ಅವರನ್ನು ರಕ್ಷಿಸಿದರು.
ದಿವ್ಯಶಕ್ತಿ ಬೋಟ್ ಸಂಪೂರ್ಣ ಮುಳುಗಡೆಗೊಂಡಿದ್ದು ಅದರಲ್ಲಿ ಡೀಸೆಲ್, ಮೀನು ಹಾಗೂ ಇನ್ನಿತರ ಪರಿಕರಗಳು ಸಮುದ್ರ ಪಾಲಾಗಿವೆ. ಸುಮಾರು 70 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ