ರಾಜ್ಯ ರಾಜಕಾರಣದಲ್ಲಿ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿರುವ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದ ತನಿಖಾ ತಂಡಗಳು ತನಿಖೆಯನ್ನು ಚುರುಕುಗೊಳಿಸಿವೆ.
ಉಡುಪಿ ಎಸ್ಪಿ ಅವರ ನೇತೃತ್ವದಲ್ಲಿ ಒಟ್ಟು ಐದು ತಂಡಗಳನ್ನು ರಚಿಸಲಾಗಿದ್ದು, ಚಿಕ್ಕಮಗಳೂರು, ಉಡುಪಿ ಹಾಗೂ ಬೆಳಗಾವಿಗೆ ತೆರಳಿರರುವ ತಂಡಗಳು ಮಾಹಿತಿ ಕಲೆ ಹಾಕುತ್ತಿವೆ.
ಮತ್ತೊಂದೆಡೆ ತಾಂತ್ರಿಕ ತಂಡ ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಮೊಬೈಲ್‍ಗೆ ಬಂದಿದ್ದ ದೂರವಾಣಿ ಕರೆಗಳ ವಿವರಗಳನ್ನು ಕಲೆ ಹಾಕಲು ಮುಂದಾಗಿದೆ. ಉಡುಪಿಗೆ ತೆರಳುವ ಮುನ್ನ ಸಂತೋಷ್ ಪಾಟೀಲ್ ಚಿಕ್ಕಮಗಳೂರಿನ ಕೈಮರದಲ್ಲಿರುವ ಹೋಮ್‍ಸ್ಟೇನಲ್ಲಿ ತಂಗಿದ್ದರು. ಇಲ್ಲಿಗೆ ಒಂದು ತಂಡ ಆಗಮಿಸಿ ಮಾಹಿತಿಯನ್ನು ಕಲೆ ಹಾಕಿದೆ.
ಹೋಮ್‍ಸ್ಟೇ ಮ್ಯಾನೇಜರ್ ಹಾಗೂ ಸಿಬ್ಬಂದಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿರುವ ತಂಡ, ಸಂತೋಷ್ ಪಾಟೀಲ್ ಯಾವಾಗ ಬಂದಿದ್ದರು, ಅವರ ಜೊತೆ ಎಷ್ಟು ಜನ ಸ್ನೇಹಿತರು ಇದ್ದರು ಸೇರಿದಂತೆ ಕೆಲವು ಗೌಪ್ಯ ಮಾಹಿತಿಗಳನ್ನು ಕಲೆ ಹಾಕಿದೆ ಎಂದು ಗೊತ್ತಾಗಿದೆ. ಬೆಳಗಾವಿಯ ಹಿಂಡಲಗ ಗ್ರಾಮಪಂಚಾಯ್ತಿಯಲ್ಲಿ ಸಂತೋಷ್ ಪಾಟೀಲ್ ನಡೆಸಿದ್ದ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಲು ಮತ್ತೊಂದು ತಂಡ ಅಲ್ಲಿಗೆ ತೆರಳಿದೆ.
ಉಡುಪಿಯಿಂದ ಆಗಮಿಸಿದ್ದ ಇಬ್ಬರು ಹಿರಿಯ ಅಕಾರಿಗಳ ತಂಡವು ಹಿಂಡಲಗ ಗ್ರಾಮದಲ್ಲಿ ಸಂತೋಷ್ ಪಾಟೀಲ್ ನಡೆಸಿದ್ದ ಕಾಮಗಾರಿಗಳನ್ನು ವೀಕ್ಷಿಸಿದರು. ಈ ವೇಳೆ ತನಿಖಾ ತಂಡದವರು ಹಿಂಡಲಗ ಗ್ರಾಮಸ್ಥರಿಂದ ಮಾಹಿತಿಯನ್ನು ಪಡೆದರು. ಈ ಕಾಮಗಾರಿ ಯಾವಾಗ ಆರಂಭವಾಗಿತ್ತು? ಇದರ ಒಟ್ಟು ಮೊತ್ತ, ವರ್ಕ್ ಆರ್ಡರ್ ನೀಡಲಾಗಿತ್ತೇ? ಎಸ್ಟಿಮೇಟ್ ಮಾಡಲಾಗಿತ್ತೆ ಎಂಬುದು ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ಮಾಹಿತಿ ಪಡೆಯಲಾಗಿದೆ.
ಮತ್ತೊಂದು ತಂಡ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದ ಉಡುಪಿಯ ಶಾಂಭವಿ ಲಾಡ್ಜ್‍ಗೆ ಪುನಃ ಇಂದು ಕೂಡ ಭೇಟಿ ಕೊಟ್ಟಿತು. ಅವರು ತಂಗಿದ್ದ ಕೊಠಡಿ ಹಾಗೂ ಸ್ನೇಹಿತರು ಉಳಿದಿದ್ದ ಮತ್ತೊಂದು ಕೊಠಡಿಗೂ ತೆರಳಿ ಮಾಹಿತಿ ಪಡೆದಿದೆ. ಈ ವೇಳೆ ಲಾಡ್ಜ್ ಮ್ಯಾನೇಜರ್ ಮತ್ತು ಸಿಬ್ಬಂದಿಯವರಿಂದ ತನಿಖಾ ತಂಡ ಘಟನೆ ಕುರಿತಾಗಿ ವಿವರಣೆ ಪಡೆದಿದೆ ಎಂದು ಗೊತ್ತಾಗಿದೆ.
ದೂರವಾಣಿ ವಿವರಗಳ ಪರಿಶೀಲನೆ: ನಾಲ್ಕನೇ ತನಿಖಾ ತಂಡವು ಇತ್ತೀಚೆಗೆ ಸಂತೋಷ್ ಅವರ ಮೊಬೈಲ್‍ಗೆ ಬಂದಿದ್ದ ಒಳ ಮತ್ತು ಹೊರ ಕರೆಗಳ ಮಾಹಿತಿಯನ್ನು ಕಲೆ ಹಾಕುತ್ತಿದೆ.ಕಳೆದ ಮೂರು ತಿಂಗಳಿನಿಂದ ಅವರ ಮೊಬೈಲ್‍ಗೆ ಎಷ್ಟು ಕರೆಗಳು ಬಂದಿವೆ. ಯಾರಿಂದ, ಎಲ್ಲಿಂದ ಬಂದಿವೆ ಮತ್ತು ಸಂತೋಷ್ ಪಾಟೀಲ್‍ಗೆ ಯಾರ್ಯಾರಿಗೆ ಕರೆ ಮಾಡಿದ್ದರು ಎಂಬುದರ ಕುರಿತು ಮಾಹಿತಿಯನ್ನು ಸಂಗ್ರಹಿಸುತ್ತಿದೆ.
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸಂತೋಷ್ ಪಾಟೀಲ್ ಮೊಬೈಲ್ ಲೊಕೆಷನ್ ಬಗ್ಗೆಯೂ, ಇನ್ನೊಂದು ತಂಡ ಮಾಹಿತಿಯನ್ನು ಪಡೆದಿದೆ. ಹೀಗೆ ಎಲ್ಲಾ ಆಯಾಮಗಳಲ್ಲೂ ಸಂತೋಷ್ ಆತ್ಮಹತ್ಯೆ ಪ್ರಕರಣವನ್ನು ಬೇಸಲು ತನಿಖಾ ತಂಡ ಮುಂದಾಗಿದೆ.
# ಅಧಿಕಾರಿಗಳ ಸಭೆ:
ಆತ್ಮಹತ್ಯೆ ಪ್ರಕರಣ ಕುರಿತಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಪ್ರತಾಪ್ ರೆಡ್ಡಿ ಅವರು ಇಂದು ಉಡುಪಿಗೆ ತೆರಳಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಉಡುಪಿ ಎಸ್ಪಿ ಅವರ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಪ್ರತಾಪ್ ರೆಡ್ಡಿ ಅವರು ಪ್ರಕರಣ ಕುರಿತಾಗಿ ಈವರೆಗೂ ತನಿಖಾ ತಂಡಗಳು ಕಲೆ ಹಾಕಿರುವ ಮಾಹಿತಿಯ ವಿವರಗಳನ್ನು ಪಡೆದಿದ್ದಾರೆ.
ಇನ್ನು ಸಂತೋಷ್ ಪಾಟೀಲ್ ಈಗಾಗಲೇ ಕೇಂದ್ರ ಸರ್ಕಾರ ನಿಷೇಸಿರುವ ಮೊನೊಕ್ರೊಟೊಫಸ್ ಎಂಬ ಕ್ರಿಮಿನಾಶಕವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗೊತ್ತಾಗಿದೆ. ಇದು ಎಲ್ಲಿಂದ ಖರೀದಿಸಲಾಗಿತ್ತು, ನಿಷೇತವಾಗಿದ್ದರೂ ಮಾರಾಟ ಮಾಡುತ್ತಿರುವವರು ಯಾರು ಎಂಬಿತ್ಯಾದಿ ವಿಷಯಗಳ ಬಗ್ಗೆ ಇಂಚಿಂಚೂ ಮಾಹಿತಿಯನ್ನು ತನಿಖಾ ತಂಡ ಕಲೆ ಹಾಕುತ್ತಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ