ಉಡುಪಿ : ಗುತ್ತಿಗೆದಾರ ಸಂತೋಷ್ ಪಾಟೀಲ ಅವರ ಕುಟುಂಬದ ಸದಸ್ಯರು ನೀಡಿರುವ ದೂರಿನ ಮೇರೆಗೆ ಸಚಿವ ಈಶ್ವರಪ್ಪ ಹಾಗೂ ಇನ್ನಿಬ್ಬರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಐಜಿಪಿ ದೇವ ಜ್ಯೋತಿ ರೇ ತಿಳಿಸಿದರು.
ಈಗಾಗಲೇ ಸಂತೋಷ್ ಸಂಬಂಧಿಕರ ಮುಂದೆ ಪಂಚನಾಮೆ ಪ್ರಕ್ರಿಯೆ ಆರಂಭಿಸಲಾಗಿದೆ, ಸ್ಥಳದಲ್ಲಿ ದೊರೆತ ಡಿಜಿಟಿಲ್ ಮತ್ತು ಸಾಂದರ್ಭಿಕ ಸಾಕ್ಷಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ಮೊದಲು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು, ಇದೀಗ ಎಫ್‌ಐಆರ್ ದಾಖಲಿಸಿಲಾಗಿದೆ. ಎಂಸಿ ಆಸ್ಪತ್ರೆಯ ಹಾಗೂ ಮಂಗಳೂರಿನ ಫೊರೆನ್ಸಿಕ್ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ಸೂಕ್ತ ರೀತಿಯಲ್ಲಿ ತನಿಖೆ ನಡೆಯುತ್ತಿದೆ ಎಂದು ಐಜಿಪಿ ಮಾಹಿತಿ ನೀಡಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ