Slider


"ಬಿಸು ಹಬ್ಬಕ್ಕೆ ತುಳುವಿನಲ್ಲಿ"ಟ್ವೀಟ್ ಮಾಡಿ ಶುಭ ಕೋರಿದ ಸಿ.ಎಂ.ಬಸವರಾಜ್ ಬೊಮ್ಮಾಯಿ 14-4-2022

ರಾಜ್ಯದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನರು ಆಚರಿಸುತ್ತಿರುವ ಬಿಸು ಹಬ್ಬ (ಸೌರಮಾನ ಯುಗಾದಿ)ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮೂಲಕ ಶುಭಕೋರಿದ್ದಾರೆ.

ತುಳುವಿನಲ್ಲಿ ಶುಭಕೋರಿದ ಮುಖ್ಯಮಂತ್ರಿ "ಪೊಸ ವರ್ಸೊದ ಪೊಸ ಗಲಿಗೆಗ್ ಪೊಸ ಬುಲೆಕ್ ಲೆನ ಕಣಿ ದೀದ್ ಪೊಲ್ಸುದ ತುಡರ್ ಪೊತ್ತಾದ್ ಬಿಸು-ಕಣಿಕ್ ಎಡ್ಡೆಪ್ಪು ಬಾಮ್ಯೊಂದುಲ್ಲೆ...ಮಹಾ ಜನತೆ ಗ್ ಬಿಸು-ವಿಷು ಪರ್ಬೊದ ಎಡ್ಡೆಪ್ಪುಲು'' ಎಂದು ಬರೆದುಕೊಂಡಿದ್ದಾರೆ.

ಬಿಸು ತುಳುನಾಡು ಪ್ರದೇಶದಲ್ಲಿ (ಮಂಗಳೂರು ಹಾಗು ಉಡುಪಿ ಜಿಲ್ಲೆಗಳು), ಸಾಮಾನ್ಯವಾಗಿ ಎಪ್ರಿಲ್ ಎರಡನೇ ವಾರದಲ್ಲಿ ಹೊಸವರ್ಷವಾಗಿ ಆಚರಿಸಲಾಗುತ್ತದೆ. ತುಳುನಾಡಿನಲ್ಲಿ 'ಬಿಸು'ವಾಗಿಯೂ ಕೇರಳದಲ್ಲಿ 'ವಿಸು'ವಾಗಿಯೂ ಅಚರಿಸಲ್ಪಡುವ ಬಿಸುಹಬ್ಬವೂ ಸುಗ್ಗಿಯನ್ನು ಸಂಕೇತಿಸುತ್ತದೆ.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo