Slider

ಬ್ರಹ್ಮಾವರ:-ಅಕ್ರಮ ಜಾನುವಾರು ಸಾಗಾಟ , ಮೂವರನ್ನು ವಶಕ್ಕೆ ಪಡೆದ ಪೊಲೀಸರು 14-4-2022

ಜಾನುವಾರು ಸಾಗಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬ್ರಹ್ಮಾವರ ಪೊಲೀಸ್ ಠಾಣೆಯ ಉಪನಿರೀಕ್ಷಕ ಗುರುನಾಥ ಬಿ ಹಾದಿಮನಿ ಹಾಗೂ ಇತರ ಸಿಬ್ಬಂದಿಗಳೊಂದಿಗೆ ಹೇರೂರು ಗ್ರಾಮದ ಹೇರಂಜೆ, ಕಾಡೋಳಿ ಎಂಬಲ್ಲಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ವಾಹನದಲ್ಲಿ ದನಗಳನ್ನು ತುಂಬಿ ಹೊರಡಲು ನೆರವಾಗುತ್ತಿದ್ದಾಗ ಥೋಮಸ್ ಡಿ ಸೋಜಾ (62), ಕೃಷ್ಣ ಪೂಜಾರಿ (46), ನಾಗೇಶ ಮರಕಾಲ (40) ಎಂಬವರನ್ನು ವಶಕ್ಕೆ ಪಡೆದು, ಹಿಂಸಾತ್ಮಕ ರೀತಿಯಲ್ಲಿ ವಾಹನದಲ್ಲಿ ತುಂಬಿದ್ದ 6 ಕರುಗಳು ಹಾಗೂ 1 ದನವನ್ನು ರಕ್ಷಿಸಿದ್ದಾರೆ. 

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo