Slider

ಮಣಿಪಾಲ:-ರಜತಾದ್ರಿ ಬಳಿ ಸರಣಿ ಅಪಘಾತ ಮೂರು ಕಾರು ಒಂದು ಬೈಕ್ ಜಖಂ 10-4-2022

ಮಣಿಪಾಲ ಎಪ್ರಿಲ್ 10: ಮಣಿಪಾಲ ರಜತಾದ್ರಿ ಸಮೀಪ ನಡೆದ ಸರಣಿ ಅಪಘಾತದಲ್ಲಿ ಮೂರು ಕಾರು ಹಾಗೂ ಒಂದು ಬೈಕ್ ಜಖಂಗೊಂಡಿರುವ ಘಟನೆ ನಡೆದಿದೆ.

ಇನ್ನೋವಾ ಕಾರೊಂದು ಮಣಿಪಾಲ ಸಿಂಡಿಕೇಟ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿ ಕಡೆಗೆ ಹೋಗುತ್ತಿದ್ದು, ಈ ಮಧ್ಯೆ ಯೂಟರ್ನ್‌ನಲ್ಲಿ ಬೈಕೊಂದು ಏಕಾಏಕಿ ಅಡ್ಡ ಬಂದಿದೆ.

ಈ ಸಂದರ್ಭ ಬೈಕಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ಇನ್ನೋವಾ ಕಾರು, ಅಲ್ಲೆ ರಸ್ತೆ ಬದಿ ನಿಲ್ಲಿಸಿದ್ದ ಎಕ್ಸ್‌ಯುವಿ ಕಾರು ಹಾಗೂ ಇನ್ನೊಂದು ಬೈಕಿಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಇದೇ ವೇಳೆ ಆ ರಸ್ತೆಯಲ್ಲಿ ಅತೀ ವೇಗದಲ್ಲಿ ಸಾಗುತ್ತಿದ್ದ ಹುಂಡೈ ವರ್ನ ಕಾರು, ನಿಯಂತ್ರಣ ತಪ್ಪಿ, ರಸ್ತೆ ಬದಿಯ ಮನೆಯ ಕಂಪೌಂಡ್‌ಗೆ ಢಿಕ್ಕಿ ಹೊಡೆದಿದೆ.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo