ಕೊಲ್ನಾಡು: "ಕೃಷಿ ಪರಂಪರೆ ಉಳಿಸುವ ಯತ್ನ ಸಂಘಟನೆಗಳ ಕಾರ್ಯ ಅಭಿನಂದನೀಯ": ಶ್ರೀಶ್ರೀ ಚಂದ್ರಶೇಖರ ಸ್ವಾಮೀಜಿ
ಮುಲ್ಕಿ ಸಮೀಪದ ಕೊಲ್ನಾಡು ನಲ್ಲಿ ನಡೆಯುತ್ತಿರುವ ಕೃಷಿಸಿರಿ 2022 ರ ಕೃಷಿ ಮೇಳಕ್ಕೆ ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತುತಜ್ಞ ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಭೇಟಿ ನೀಡಿದರು.
ಕೃಷಿಸಿರಿ ಕಾರ್ಯಕ್ರಮಕ್ಕೆ ಸ್ವಾಮೀಜಿಯವರನ್ನು ಸಂಘಟನೆಯ ಪದಾಧಿಕಾರಿ ವಿನೋದ್ ಸಾಲ್ಯಾನ್ ಬೆಳ್ಳಾಯರು ಹಾಗೂ ಮಹೀಮ್ ಹೆಗ್ಡೆ ನೇತೃತ್ವದಲ್ಲಿ ಭವ್ಯವಾದ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.
ಈ ಸಂದರ್ಭ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಮಾಧ್ಯಮದವರೊಂದಿಗೆ ಮಾತನಾಡಿ ಹಿಂದಿನ ಕಾಲದ ಗ್ರಾಮೀಣ ಪ್ರದೇಶದ ಕೃಷಿ ಪರಂಪರೆಯನ್ನು ಬಿಂಬಿಸುವ ಕೃಷಿ ಮೇಳ ಉತ್ತಮವಾಗಿ ಮೂಡಿಬಂದಿದ್ದು ಕೃಷಿ ಸಾಧಕರನ್ನು ಗೌರವಿಸುವ ಮೂಲಕ ಕೃಷಿಗೆ ಪ್ರಾಧಾನ್ಯತೆ ನೀಡಿರುವ ಸಂಘಟನೆಗಳ ಕಾರ್ಯ ಅಭಿನಂದನೀಯ ಎಂದರು.
ಇದೇ ಸಂದರ್ಭದಲ್ಲಿ ಸ್ವಾಮೀಜಿಯವರು ಕೃಷಿ ಮೇಳದಲ್ಲಿ ಪ್ರಾಚೀನ ಕಾಲದ ತುಳುನಾಡಿನ ದೈವ ದೇವರುಗಳ ಪರಿಕರಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಕಸಾಪ ಮಾಜೀ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಜ್ಯೋತಿಷಿ ವಿಶ್ವನಾಥ ಭಟ್, ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿ ಸಿ ಭಟ್, ರಾಹುಲ್ ಸಿ ಭಟ್, ಸಂಚಾಲಕ ಪುನೀತ್ ಕೃಷ್ಣ, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು,ಕೃಷಿ ಮೇಳದ ಅಧ್ಯಕ್ಷ ವಿಜಯ ಶೆಟ್ಟಿ,
ಸಮ್ಮೇಳನದ ಗೌರವಾಧ್ಯಕ್ಷ ಜಿ. ಆರ್. ಪ್ರಸಾದ್, ಕೋಶಾಧಿಕಾರಿ ಜಗದೀಶ್ ಪೈ, ಪ್ರಧಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಸಂಚಾಲಕರಾದ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು, ಕೃಷ್ಣ ಶೆಟ್ಟಿ ತಾರೆಮಾರ್, ಪ್ರಶಾಂತ್ ಜಿ ಪೈ, ರತ್ನಾಕರ್ ಕುಳಾಯಿ, ಸಲಹೆಗಾರರಾದ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಕದ್ರಿ ನವನೀತ್ ಶೆಟ್ಟಿ, ಜೀವನ್ ಕೆ ಶೆಟ್ಟಿ ಮುಲ್ಕಿ, ,ಜೊತೆ ಕಾರ್ಯದರ್ಶಿ ಚಂದ್ರಹಾಸ ಕುಂದರ್, ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ