ಕಳೆದೆರಡು ದಿನಗಳಿಂದ 24 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ 760 ರೂ. ಹೆಚ್ಚಳವಾಗುವ ಮೂಲಕ ಬಂಗಾರದ ಬೆಲೆ ಏರುತ್ತ ಸಾಗುತ್ತಿದೆ. ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ರಷ್ಯಾ- ಉಕ್ರೇನ್ ಯುದ್ಧ ಕೂಡ ಕಾರಣ ಎನ್ನಲಾಗಿತ್ತು. ಚಿನ್ನ ಮಾತ್ರವಲ್ಲದೆ ಬೆಳ್ಳಿ ಬೆಲೆಯಲ್ಲಿಯೂ ಏರಿಕೆ ಕಂಡಿತ್ತು.
ಭಾರತದ ಅನೇಕ ನಗರಗಳಲ್ಲಿ ಚಿನ್ನದ ಬೆಲೆ 2 ದಿನಗಳಿಂದ ಹೆಚ್ಚುತ್ತಲೇ ಇದ್ದು ಇಂದು ಯಾವುದೇ ಏರಿಕೆ ಅಥವಾ ಇಳಿಕೆ ಕಂಡಿಲ್ಲ. ಇಂದು ಚಿನ್ನದ ಬೆಲೆ 48,400 ರೂ. ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 52,800 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.
ಪ್ರಮುಖ ನಗರಗಳಾದ ಚೆನ್ನೈ- 49,700 ರೂ, ಮುಂಬಯಿ- 48,400 ರೂ, ದೆಹಲಿ- 48,400 ರೂ, ಕೊಲ್ಕತ್ತಾ- 48,400 ರೂ, ಬೆಂಗಳೂರು- 48,400 ರೂ, ಹೈದರಾಬಾದ್- 48,400 ರೂ, ಕೇರಳ- 48,400 ರೂ, ಪುಣೆ- 48,450 ರೂ, ಮಂಗಳೂರು- 48,400 ರೂ, ಮೈಸೂರು- 48,400 ರೂ. ಇದೆ.
24 ಕ್ಯಾರೆಟ್ ಚಿನ್ನದ ಬೆಲೆ ಚೆನ್ನೈ- 54,220 ರೂ, ಮುಂಬಯಿ- 52,800 ರೂ, ದೆಹಲಿ- 52,800 ರೂ, ಕೊಲ್ಕತ್ತಾ- 52,800 ರೂ, ಬೆಂಗಳೂರು- 52,800 ರೂ, ಹೈದರಾಬಾದ್- 52,800 ರೂ, ಕೇರಳ- 52,800 ರೂ, ಪುಣೆ- 52,850 ರೂ, ಮಂಗಳೂರು- 52,800 ರೂ, ಮೈಸೂರು- 52,800 ರೂ. ಇದೆ
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ