ರಷ್ಯಾ ಹಾಗೂ ಉಕ್ರೇನ್ ಯುದ್ಧದ ಕುರಿತು ನೆದರ್ಲೆಂಡ್ ನ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಿದೆ.
ಎರಡು ದಿನಗಳ ಕಾಲ ವಿಚಾರಣೆ ನಡೆಯಲಿದ್ದು, ಸೋಮವಾರ ಉಕ್ರೇನ್ ತನ್ನ ವಾದ ಮಂಡಿಸಿದರೆ, ನಾಳೆ ರಷ್ಯಾ ತನ್ನ ಪ್ರತಿಕ್ರಿಯೆ ನೀಡಲಿದೆ.
ಉಕ್ರೇನ್ ಫೆಬ್ರವರಿ 27 ರಂದು ವಿಶ್ವಸಂಸ್ಥೆಯ ಅತ್ಯುನ್ನತ ನ್ಯಾಯಾಲಯದಲ್ಲಿ(ICJ) ರಷ್ಯಾದ ವಿರುದ್ಧ ಮೊಕದ್ದಮೆ ಹೂಡಿದ್ದು, ಪುಟಿನ್ ಆಕ್ರಮಣವನ್ನು ತಕ್ಷಣ ನಿಲ್ಲಿಸಲು ಅಗತ್ಯವಿರುವ ತುರ್ತು ತೀರ್ಪನ್ನು ನೀಡುವಂತೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ.
ಉಕ್ರೇನ್ ತನ್ನ ವಾದವನ್ನು ಮಂಡಿಸಿದ್ದು, ರಷ್ಯಾ ಮಂಗಳವಾರ ಇದಕ್ಕೆ ಪ್ರತಿಕ್ರಿಯೆ ನೀಡಲಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ