ಮೃತ ಶೇಖರ್ (50) ಕೊಲೆಗೀಡಾದವರು. ಶೇಖರ್ ಸಹೋದರ ರಾಜು(35) ಕೊಲೆಗೈದ ಆರೋಪಿ. ಜಾಗದ ತಕರಾರಿಗೆ ಸಂಬಂಧಿಸಿದಂತೆ ಈ ಕೊಲೆ ನಡೆದಿದೆ ಎಂದು ಆರೋಪಿಸಲಾಗಿದೆ.
ಶೇಖರ್ ಮತ್ತು ರಾಜು ಸಹೋದರರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ತಾಯಿಗೆ ಮಂಜೂರಾದ ಭೂಮಿಯಲ್ಲಿ ಅಣ್ಣ ಶೇಖರ ವಾಸವಾಗಿದ್ದ. ಅಣ್ಣನೊಂದಿಗೆ ವೈಮನಸ್ಸಿನಿಂದ ರಾಜು ಪ್ರತ್ಯೇಕ ಶೆಡ್ ನಿರ್ಮಾಣ ಮಾಡಿಕೊಂಡು ವಾಸವಾಗಿದ್ದ.
ಬಾನುವಾರ ಶೇಖರನ ಮನೆಯಲ್ಲಿ ಅಂಗಳದ ಕಾಮಗಾರಿ ನಿರ್ವಹಿಸುತ್ತಿದ್ದು, ಮೂವರು ಕೆಲಸಗಾರರೊಂದಿಗೆ ಜೆಲ್ಲಿಯನ್ನು ಹೊತ್ತುಮನೆಗೆ ಸಾಗಿಸುತ್ತಿದ್ದ. ಅಲ್ಲಿಗೆ ಪಾನಮತ್ತನಾಗಿ ಆಗಮಿಸಿದ ರಾಜು ಮನೆಯಲ್ಲಿ ದುರಸ್ತಿ ಕೆಲಸ ನಿರ್ವಹಿಸದಂತೆ ಆಕ್ಷೇಪಿಸಿದ್ದ ಎನ್ನಲಾಗಿದೆ.
ನಂತರ ರಾಜು ಚೂರಿಯನ್ನು ತಂದು ಅಣ್ಣನ ಕುತ್ತಿಗೆ ಮತ್ತು ಹೊಟ್ಟೆಯ ಭಾಗಕ್ಕೆ ಇರಿದಿದ್ದಾನೆಂದು ಆರೋಪಿಸಲಾಗಿದೆ. ಅತೀವ ರಕ್ತಸ್ರಾವದಿಂದ ಶೇಖರ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನುಈ ಕೃತ್ಯ ನಡೆಸಿದ ರಾಜು ಪರಾರಿಯಾಗಿದ್ದು, ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ