ಪ್ರಧಾನ ಮಂತ್ರಿ ನರೇಂದ್ರ ಮೋದಿ ಸುಮಾರು 35 ನಿಮಿಷಗಳ ಕಾಲ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆಗೆ ಮಾತುಕತೆ ನಡೆಸಿದ್ದಾರೆ. ರಷ್ಯಾ ದಾಳಿಯ ಬಳಿಕ ಉಕ್ರೇನ್‌ನ ಸ್ಥಿತಿಯ ಬಗ್ಗೆ ಉಭಯ ದೇಶದ ನಾಯಕರುಗಳು ಮಾತುಕತೆ ನಡೆಸಿದ್ದಾರೆ ಎಂದು ವರದಿಯು ಉಲ್ಲೇಖ ಮಾಡಿದೆ.
ಇನ್ನು ಈ ಸಂದರ್ಭದಲ್ಲಿ ಉಕ್ರೇನ್‌ನ ಈಶಾನ್ಯ ಭಾಗದ ಸುಮಿ ನಗರದಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಸ್ಥಳಾಂತರ ಮಾಡಲು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಸಹಕಾರವನ್ನು ಕೋರಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿದೆ. ಯುದ್ಧ ಪೀಡಿತ ರಾಷ್ಟ್ರ ಉಕ್ರೇನ್‌ನ ಸುಮಿ ನಗರದಲ್ಲಿ ಸುಮಾರು 700 ಭಾರತೀಯರು ಸಿಲುಕಿದ್ದಾರೆ ಎಂದು ವರದಿ ಹೇಳಿದೆ.
ಉಕ್ರೇನ್‌ನ ಬೇರೆ ಪ್ರದೇಶಗಳಿಂದ ಭಾರತೀಯರು ಉಕ್ರೇನ್‌ನ ಗಡಿ ಭಾಗಕ್ಕೆ ತಲುಪಿದ ಬಳಿಕ ಅಲ್ಲಿಂದ ಭಾರತಕ್ಕೆ ಭಾರತೀಯರನ್ನು ಸ್ಥಳಾಂತರ ಮಾಡಲಾಗುತ್ತಿದೆ. ಆದರೆ ಈ ನಡುವೆ ಉಕ್ರೇನ್‌ನ ಸುಮಿ ನಗರದಲ್ಲಿ 700 ಭಾರತೀಯರು ಸಿಲುಕಿದ್ದು ಸ್ಥಳಾಂತರಕ್ಕೆ ಪ್ರಯತ್ನ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಉಕ್ರೇನ್ ಸರ್ಕಾರದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹಕಾರಿ ಕೋರಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ