ನವದೆಹಲಿ: 60 ಕಿ.ಮೀ. ವ್ಯಾಪ್ತಿಯೊಳಗಡೆ ಸಂಚರಿಸುವವರಿಗೆ ಇನ್ಮುಂದೆ ಟೋಲ್ ತೆರಿಗೆ ಇರುವುದಿಲ್ಲ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಮುಂದಿನ ಮೂರು ತಿಂಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ 60 ಕಿಲೋಮೀಟರ್ ಅಂತರದಲ್ಲಿರುವ ಎಲ್ಲಾ ಟೋಲ್ ಸಂಗ್ರಹ ಕೇಂದ್ರಗಳನ್ನು ಮುಚ್ಚಲಾಗುವುದು ಎಂದು ಲೋಕಸಭೆಯಲ್ಲಿ ಸಚಿವರು ಘೋಷಿಸಿದ್ದಾರೆ.
ಏಪ್ರಿಲ್ 1 ರಿಂದ ಪ್ರಾರಂಭವಾಗುವ ಆರ್ಥಿಕ ವರ್ಷದ ಬಜೆಟ್‌ನ ರಸ್ತೆಗಳು ಮತ್ತು ಹೆದ್ದಾರಿಗಳ ಹಂಚಿಕೆಯ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಗೆ ಉತ್ತರಿಸುವಾಗ ಸಚಿವರು, ಇನ್ಮುಂದೆ 60 ಕಿ.ಮೀ. ವ್ಯಾಪ್ತಿಯಲ್ಲಿ ಕೇವಲ ಒಂದು ಟೋಲ್ ಸಂಗ್ರಹವಿರುತ್ತದೆ ಎಂದು ತಿಳಿಸಿದ್ದಾರೆ.
ರಸ್ತೆಗಳ ನಿರ್ಮಾಣ ಕುರಿತು ಮಾತನಾಡಿದ ಅವರು, ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇ ಸಿದ್ಧವಾಗುತ್ತಿದೆ. ದೆಹಲಿ-ಅಮೃತಸರ ಭಾಗವನ್ನು ಈ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳಿಸಲಾಗುವುದು. ಮುಂದೆ ಕತ್ರಾ-ಅಮೃತಸರ-ದೆಹಲಿ ರಸ್ತೆಗೆ ಶ್ರೀನಗರ-ಜಮ್ಮು ರಸ್ತೆ ಸಂಪರ್ಕ ಕಲ್ಪಿಸಲಾಗುವುದು ಎಂದಿದ್ದಾರೆ.
ಈ ರಸ್ತೆಯ ಮೂಲಕ ಶ್ರೀನಗರದಿಂದ ಮುಂಬೈಗೆ 20 ಗಂಟೆಗಳಲ್ಲಿ ಪ್ರಯಾಣ ಮಾಡಬಹುದು. ಜಮ್ಮು-ಶ್ರೀನಗರ ಹೆದ್ದಾರಿ ನವೀಕರಣವನ್ನು ವರ್ಷಾಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ದೆಹಲಿ-ಜೈಪುರ, ದೆಹಲಿ-ಮುಂಬೈ ಮತ್ತು ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇಗಳನ್ನು ವರ್ಷಾಂತ್ಯದೊಳಗೆ ಪೂರ್ಣಗೊಳಿಸಲಾಗುವುದು. ಜೈಪುರ ಮತ್ತು ಡೆಹ್ರಾಡೂನ್‌ಗೆ ಎರಡು ಗಂಟೆಗಳಲ್ಲಿ ತಲುಪಬಹುದಾದರೆ, ದೆಹಲಿ-ಮುಂಬೈ ದೂರವನ್ನು 12 ಗಂಟೆಗಳಲ್ಲಿ ಕಾರಿನಲ್ಲಿ ಕ್ರಮಿಸಬಹುದು ಎಂದು ಹೇಳಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ