ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ಮುಂದಿನ ಆರು ತಿಂಗಳವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಹಲವು ಜನೋಪಯೋಗಿ ಕಾರ್ಯಗಳಿಗೆ ಅನುಮೋದನೆಯನ್ನು ನೀಡಲಾಗಿದೆ.
ಅದ್ರಲ್ಲಿ ಮುಖ್ಯವಾಗಿ ಪಿಎಂ ಗರೀಬ್ ಕಲ್ಯಾಣ್ ಯೋಜನೆಯ ಅವಧಿಯನ್ನು 6 ತಿಂಗಳು ವಿಸ್ತರಿಸುವಂತ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ನಿರ್ಧಾರಕ್ಕೆಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಕೂಡ ನೀಡಲಾಗಿದೆ.
ಕೊರೋನಾ ಲಾಕ್ ಡೌನ್ ವೇಳೆ ಬಡವರಿಗೆ, ಅವರ ಜೀವನೋಪಾಯವನ್ನು ಬೆಂಬಲಿಸೋದಕ್ಕಾಗಿ ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಗರೀಪ್ ಕಲ್ಯಾಣ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಆತ್ಮನಿರ್ಭರ್ ಭಾರತದ ಒಂದು ಭಾಗವಾಗಿದ್ದ ಈ ಯೋಜನೆ ಮೊದಲ ಹಂತ ಮತ್ತು 2ನೇ ಹಂತವನ್ನು ಏಪ್ರಿಲ್ 2020 ರಿಂದ ನವೆಂಬರ್ 2020ವರೆಗೆ ಜಾರಿಗೊಳಿಸಲಾಗಿತ್ತು.
ಮೂರನೇ ಹಂತವು ಮೇ ನಿಂದ ಜೂನ್ 2021ರವರೆಗೆ ನಡೆಯಿತು. ನಾಲ್ಕನೇ ಹಂತವನ್ನು ಜುಲೈ ನಿಂದ ನವೆಂಬರ್ 2021ರವರೆಗೆ ನೀಡಲಾಗಿತ್ತು. ಪ್ರಸ್ತುತ 5ನೇ ಹಂತವನ್ನು ಮಾರ್ಚ್ 2022ರವರೆಗೆ ವಿಸ್ತರಿಸಲಾಗಿತ್ತು. ಈ ತಿಂಗಳು ಅಂತ್ಯಗೊಳ್ಳಲಿದ್ದ ಈ ಯೋಜನೆಯನ್ನು ಇದೀಗ ಮುಂದಿನ ಆರು ತಿಂಗಳವರೆಗೆ ಮತ್ತೆ ವಿಸ್ತರಿಸಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ