ಮನೆಯ ಬಾಗಿಲಲ್ಲಿ ಎರಡು ಕುಟುಂಬಗಳ ಇಬ್ಬರು ಗಂಡು ಮತ್ತು ಹೆಣ್ಣು ಮಕ್ಕಳು ಮೃತಪಟ್ಟಿದ್ದು, ಹಣವೂ ಬಿದ್ದಿರುವುದು ಕಂಡು ಬಂದಿದೆ.
ಮಕ್ಕಳ ಸಾವಿಗೆ ಚಾಕೋಲೆಟ್ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ಮನೆಯ ಮುಂದೆ ಬಿದ್ದಿದ್ದ ಚಾಕೋಲೆಟ್ ತೆಗೆದುಕೊಂಡ ಹಿರಿಯ ಬಾಲಕ ಮೂವರ ಜೊತೆ ಹಂಚಿಕೊಂಡಿದ್ದ. ಚಾಕೋಲೆಟ್ ಸೇವಿಸಿದ ಕೆಲವೇ ಕ್ಷಣಗಳಲ್ಲಿ ಮಕ್ಕಳು ಅಸ್ವಸ್ಥರಾಗಿ ಬಿದ್ದಿದ್ದಾರೆ.
ಕುಟುಂಬದವರು ಕೂಡಲೇ ಇದನ್ನು ಗಮನಿಸಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದ ಕುಟುಂಬ ಇದಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉತ್ತರ ಪ್ರದೇಶದ ಹಂಗಾಮಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ