Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

*ಸಿದ್ದರಾಮಯ್ಯನವರು ಸಮವಸ್ತ್ರ ವಿರೋಧಿಸುತ್ತಾರೆ, ಹಿಜಾಬ್‌ ಅನ್ನು ಸ್ವಾಗತಿಸುತ್ತಾರೆ: ಗೃಹಸಚಿವ ಆರಗ ಜ್ಞಾನೇಂದ್ರ*26-3-2022

*ಸಿದ್ದರಾಮಯ್ಯನವರು ಸಮವಸ್ತ್ರ ವಿರೋಧಿಸುತ್ತಾರೆ, ಹಿಜಾಬ್‌ ಅನ್ನು ಸ್ವಾಗತಿಸುತ್ತಾರೆ: ಗೃಹಸಚಿವ ಆರಗ ಜ್ಞಾನೇಂದ್ರ*

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮವಸ್ತ್ರವನ್ನು ವಿರೋಧಿಸುತ್ತಾರೆ, ಆದರೆ ಹಿಜಾಬ್ ಅನ್ನು ಸ್ವಾಗತ ಮಾಡುತ್ತಾರೆ ಬಹಳ ವರ್ಷಗಳಿಂದ ಅವರು ಇದನ್ನೇ ಮಾಡಿಕೊಂಡು ಬಂದಿದ್ದಾರೆ. ಇದು ಅವರ ಸಂಸ್ಕೃತಿ ಎಂದು ಗೃಹ ಸಚಿವ ಅರಗ ಜ್ಙಾನೇಂದ್ರ ಛೇಡಿಸಿದರು.


ಏ. 1 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡುವ ಹಿನ್ನಲೆಯಲ್ಲಿ ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದ ಜನ ಕಾಂಗ್ರೆಸ್ ಪಕ್ಷಕ್ಕೆ ಅವರ ಜಾಗ ಎಲ್ಲಿ ಎಂದು ತೋರಿಸುತ್ತಿದ್ದಾರೆ. 

ಸತ್ಯ ಹೇಳೋಕೆ ಅವರು ತಯಾರಿಲ್ಲ, ನಿಷ್ಠೂರವಾಗಿ ಮಾತನಾಡಲು ತಯಾರಿಲ್ಲ. ಮತಬ್ಯಾಂಕ್ ಗಟ್ಟಿ ಮಾಡುವಂತಹ ರಾಜಕಾರಣದ ಆಟ ಬಹಳ ವರ್ಷ ನಡೆಯುವುದಿಲ್ಲ. ಐದು ರಾಜ್ಯಗಳ ಚುನಾವಣೆ ಅವರಿಗೆ ಪಾಠ ಕಲಿಸಿದೆ. ದೇಶದಲ್ಲಿ ಅವರು ಎಲ್ಲಿದ್ದಾರೆ ಎಂಬುದನ್ನು ಹುಡುಕುವ ಸ್ಥಿತಿ ಬಂದಿದೆ. ಕರ್ನಾಟಕ ರಾಜ್ಯದಲ್ಲಿ ಆಕ್ಸಿಜನ್ ಪೈಪ್‌ ನಲ್ಲಿ ಉಸಿರಾಡುವಂತೆ ಅವರು ಇದ್ದಾರೆ. ಮುಂದಿನ ಚುನಾವಣೆಯಲ್ಲಿ ಅದನ್ನು ಸಹ ಜನರು ಕಿತ್ತು ಹಾಕುತ್ತಾರೆ ಎಂದರು.


ಹಿಂದುಗಳ ಜಾತ್ರೆ ಸೇರಿ ಸಂದರ್ಭದಲ್ಲಿ ಮುಸ್ಲೀಂ ಅವರಿಗೆ ವ್ಯಾಪರಕ್ಕೆ ಅನುಮತಿ ಇಲ್ಲ ಎಂಬುದು ಚರ್ಚೆಯಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಚರ್ಚೆಯ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೇ ಈ ತರಹದ ನಿಬಂಧನೆ ಮಾಡಿಟ್ಟಿದೆ. ದೇವಸ್ಥಾನಗಳಲ್ಲಿ ಅನ್ಯ ಧರ್ಮಿಯರ ವ್ಯಾಪಾರ, ವ್ಯವಹಾರಕ್ಕೆ ಅವಕಾಶವಿಲ್ಲ. ಹಾಗಾಗಿ ದೇವಾಲಯದ ಆವರಣದೊಳಗಡೆ ಅನುಮತಿ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ ಎಂದರು.


ಎಲ್ಲರೂ ಕೂಡ ಸಂತೋಷವಾಗಿ ದೇಶದಲ್ಲಿ ಬದುಕಬೇಕು ಎಂಬುದು ಬಿಜೆಪಿಯ ಉದ್ದೇಶ. ಯಾರೋ ಮತಾಂಧ ಶಕ್ತಿಗಳು ಹಿಜಾಬ್ ಸಮಸ್ಯೆಯನ್ನು ನಿರ್ಮಾಣ ಮಾಡಿದ್ದಾರಲ್ಲ ಆರೀತಿಯ ಸಮಸ್ಯೆಗಳನ್ನು ನಿರ್ಮಾಣ ಮಾಡಬಾರದು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು. ಇತ್ತೀಚಿನ ದಿನಗಳಲ್ಲಿ ಸದನದ ಒಳಗೆ ಮತ್ತು ಹೊರಗೆ ಅಸಂಸದೀಯ ಪದಗಳ ಬಳಕೆ ಯಾಗುತ್ತಿದೆ ಎಂಬುದರ ಬಗ್ಗೆ ಉತ್ತರಿಸಿ ಆತ್ಮೀಯವಾಗಿ ಸಲುಗೆಯಿಂದ ಕೆಲವು ಪದಗಳು ಬಂದಿರುತ್ತವೆ ಹೊರತು ಉದ್ದೇಶಪೂರ್ವಕವಾಗಿ ಯಾರೂ ಹಾಗೆ ಮಾತನಾಡುವುದಿಲ್ಲ ಎಂದರು.


ಪೊಲೀಸ್ ಇಲಾಖೆಯನ್ನು ಹಳೆಯ ಕುದುರೆಗೆ ಹೋಲಿಸಿರುವ ಬಗ್ಗೆ ಮಾತನಾಡಿ, ಕಾಂಗ್ರೆಸ್ ಅಧಿಕಾರಿದಲ್ಲಿದ್ದಾಗ ಎಷ್ಟು ಕೊಲೆಗಳು, ಸುಲಿಗೆಗಳಾಯಿತು ಎಂಬುದರ ಬಗ್ಗೆ ಅವರಿಗೆ ತಿಳಿಸಬೇಕಾಲ್ಲ. ಅದಕ್ಕಾಗಿ ಕಂಪೇರಿಸನ್ ನೀಡಿದ್ದೇನೆ. ನಾನು ಗೃಹ ಸಚಿವನಾದ ಮೇಲೆ ನಾನು ನೇಮಕಾತಿ ಮಾಡಿದವರು ಯಾರೂ ಇನ್ನು ಅಧಿಕಾರ ವಹಿಸಿಕೊಂಡಿಲ್ಲ ಅವರಿನ್ನು ತರಬೇತಿಯಲ್ಲಿ ಇದ್ದಾರೆ. ಸರ್ಕಾರ ಬದಲಾವಣೆಯಾದಗ ಗೃಹ ಸಚಿವರು ಮಾತ್ರ ಬದಲಾವಣೆಯಾಗುತ್ತಾರೆ ಉಳಿದವರು ಅವರೇ ಇದ್ದಾರೆ. ಹಾಗಾಗಿ ಅವರು ಓಡಿಸಿದ ಕುದುರೆ ಅದು ಅದಕ್ಕಾಗಿ ಕಡಿವಾಣ ಹಾಕಬೇಕಿದೆ ಎಂದರು. ಅದಕ್ಕೆ ಕಾಲಾವಕಾಶ ಬೇಕಾಗುತ್ತದೆ ಎಂದರು. 

ಜಿಲ್ಲಾ ಆಸ್ಪತ್ರೆಯಲ್ಲಿ ಲಂಚ ತೆಗೆದುಕೊಳ್ಳುತ್ತಾರೆ. ಪದೇ ಪದೇ ದುಡ್ಡು ಕೇಳುತ್ತಾರೆ ಎಂಬ ಆರೋಪಕ್ಕೆ ಉತ್ತರಿಸಿ ಆರೋಪ ಮಾಡಿದರೆ ಏನು ಮಾಡಲು ಸಾಧ್ಯವಿಲ್ಲ. ಅದರ ಬಗ್ಗೆ ವಿಡಿಯೋ ಇದ್ದರೆ ವಿಡಯೋ ಕೊಡಿ, ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo