ಇಂದು ಬೆಳಗ್ಗೆ 9.30 ರಿಂದ ಆರಂಭವಾದ ಬಿಕಾಂ ಪರೀಕ್ಷೆಗೆ ಪ್ರವೇಶ ಪತ್ರ ಪಡೆಯಲು ಅರ್ಧಗಂಟೆ ಅವಕಾಶ ಕೊಡಲಾಗಿತ್ತು. ಆದರೆ, ಮುಸ್ಕಾನ್ ಪರೀಕ್ಷೆಗೆ ಗೈರಾಗಿದ್ದಾರೆ.
ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ಕೊಡದಿದ್ದರೆ ಮಗಳನ್ನು ಕಾಲೇಜಿಗೆ ಕಳುಹಿಸಲ್ಲ ಎಂದು ಮುಸ್ಕಾನ್ ತಂದೆ ಹೇಳಿದ್ದರು. ಜೊತೆಗೆ ಹಿಜಾಬ್ಗೆ ಅವಕಾಶವಿರುವ ಬೇರೆ ಕಾಲೇಜಿಗೆ ಸೇರಿಸುವ ಬಗ್ಗೆಯೂ ಚಿಂತನೆ ನಡೆಸಿದ್ದರು.
ಮಂಡ್ಯದ ಪಿಇಎಸ್ ಕಾಲೇಜಿನ ವಿದ್ಯಾರ್ಥಿನಿ ಮುಸ್ಕಾನ್ ಖಾನ್, ಹಿಂದೂ ವಿದ್ಯಾರ್ಥಿಗಳು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಕ್ಕೆ ಪ್ರತಿಯಾಗಿ ಅಲ್ಲಾಹು ಅಕ್ಬರ್ ಎಂದು ಕೂಗಿದ್ದರು. ಇದಾದ ಬಳಿಕ ಮುಸ್ಕಾನ್ ಸಾಕಷ್ಟು ಸುದ್ದಿಯಾಗಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ