Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

*"ಪೆಟ್ರೋಲ್ ಬೆಲೆ ನಿಯಂತ್ರಣದಲ್ಲಿಡಬೇಕಾದರೆ ಪ್ರತೀ ತಿಂಗಳು ಚುನಾವಣೆ ನಡೆಸಬೇಕು": ಸಂಸದೆ ಸುಪ್ರಿಯಾ ಸುಲೆ ವ್ಯಂಗ್ಯ*23-3-2022

*"ಪೆಟ್ರೋಲ್ ಬೆಲೆ ನಿಯಂತ್ರಣದಲ್ಲಿಡಬೇಕಾದರೆ ಪ್ರತೀ ತಿಂಗಳು ಚುನಾವಣೆ ನಡೆಸಬೇಕು": ಸಂಸದೆ ಸುಪ್ರಿಯಾ ಸುಲೆ ವ್ಯಂಗ್ಯ*

ಹೊಸದಿಲ್ಲಿ: ಪ್ರತಿ ತಿಂಗಳು ಚುನಾವಣೆ ನಡೆಸುವುದರಿಂದ ಇಂಧನ ಬೆಲೆ ಏರಿಕೆಗೆ ಕಡಿವಾಣ ಹಾಕಬಹುದು ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಲೆ ಲೋಕಸಭೆಯಲ್ಲಿ ಬುಧವಾರ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಅಡುಗೆ ಅನಿಲದ ಬೆಲೆ ಏರಿಕೆಯಿಂದ ಮಹಿಳೆಯರು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಸುಳೆ ಅವರು ವ್ಯಂಗ್ಯವಾಗಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದಿದ್ದಾರೆ.


ಇತ್ತೀಚೆಗೆ ಚುನಾವಣೆ ಮುಗಿದ ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸಿದ ಕೂಡಲೇ ಇಂಧನ ಬೆಲೆಗಳನ್ನು ಹೆಚ್ಚಿಸಲಾಗಿದೆ ಎಂದು ಸುಲೆ ಹೇಳಿದ್ದಾರೆ.
"ಚುನಾವಣೆಗಳು ಮಾತ್ರ ಇಂಧನ ಬೆಲೆಗಳನ್ನು ನಿಯಂತ್ರಣದಲ್ಲಿಡಬಹುದು. ಚುನಾವಣೆಗಳು ಆಡಳಿತ ಪಕ್ಷವನ್ನು ಕಾರ್ಯನಿರತವಾಗಿಸುತ್ತದೆ, ಇಂಧನ ವಸ್ತುಗಳ ಬೆಲೆಗಳು ನಿಯಂತ್ರಣದಲ್ಲಿ ಇರಿಸುತ್ತದೆ" ಎಂದು ಅವರು ಹೇಳಿದ್ದಾರೆ.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo